ಹೆದ್ದಾರಿ ನಿರ್ಮಾಣ ಕಾಮಗಾರಿ: ವಿವಿಧ ಕಡೆಗಳಲ್ಲಿ ಅಂಡರ್‌ಪಾಸ್, ಫೂಟ್‌ಓವರ್ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಮನವಿ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ೬೬ರ ಅಭಿವೃದ್ಧಿಗೆ ಸಂಬಂಧಿಸಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಲು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾದರು.
ಕುಣಿಯದಲ್ಲಿ ಪ್ರತ್ಯೇಕ ಫೂಟ್‌ಓವರ್ ಬ್ರಿಡ್ಜ್ ಸ್ಥಾಪಿಸಬೇಕೆಂದು, ಉಪ್ಪಳದಲ್ಲಿ ಫ್ಲೈಓವರ್‌ನ ದೂರವನ್ನು ಹೆಚ್ಚಿಸಬೇಕೆಂದು, ಚೇರುಂಬದಲ್ಲೂ, ನುಳ್ಳಿಪ್ಪಾಡಿಯಲ್ಲೂ ಅಂಡರ್ ಪಾಸ್ ಮಂಜೂರು ಮಾಡಬೇಕೆಂದು, ಶಿರಿಯದಲ್ಲಿ ಓವರ್ ಬ್ರಿಡ್ಜ್ ಹಾಗೂ ಮುಳಿಕ್ಕಲ್‌ನಲ್ಲಿ ಫೂಟ್ ಓವರ್ ಬ್ರಿಡ್ಜ್ ಮಂಜೂರು ಮಾಡಬೇಕೆಂದು ಮನವಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ತಿಗೊಂಡು ಸಂಚಾರ ಆರಂಭಗೊಂಡರೆ ಈ ಮನವಿಯಲ್ಲಿ ತಿಳಿಸಿದ ನಿರ್ದೇಶಗಳನ್ನು ಜ್ಯಾರಿಗೊಳಿಸದಿದ್ದರೆ ಜನರಿಗೆ ಬಹಳ ಸಂಕಷ್ಟ ಉಂಟಾಗಬಹುದೆಂದು ಅಶ್ವಿನಿ ಕೇಂದ್ರ ಮಂತ್ರಿಗೆ ಮನವರಿಕೆ ಮಾಡಿದ್ದಾರೆ.