ಹೆರಿಗೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಒಂಭತ್ತು ತಿಂಗಳ ಗರ್ಭಿಣಿ ಮೃತ್ಯು
ಕುಂಬಳೆ: ಹೆರಿಗೆ ಸಂಬಂಧವಾದ ಅಸೌಖ್ಯದ ಹಿನ್ನೆಲೆಯಲ್ಲಿ ಕುಂಬಳೆಯ ಆಸ್ಪತ್ರೆಯಲ್ಲಿ ದಾಖಲುಗೊಂಡ ೯ ತಿಂಗಳ ಗರ್ಭಿಣಿಯಾಗಿದ್ದ ಯುವತಿ ಮೃತಪಟ್ಟರು. ಪಾಕಂ ನಿವಾಸಿ ದಾಮೋದರನ್ರ ಪತ್ನಿ ಗೀತಾ (38) ಮೃತಪಟ್ಟವರು. ಅಂಗಡಿಮೊಗರು ಮಂಟಪ್ಪಾಡಿಯ ಶಂಕರ ಪಾಟಾಳಿ- ಲಲಿತ ದಂಪತಿ ಪುತ್ರಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಿದ ಗೀತಾರಿಗೆ ಸ್ಕ್ಯಾನಿಂಗ್ ನಡೆಸಲಾಗಿತ್ತು. ಸ್ಕ್ಯಾನಿಂಗ್ನಲ್ಲಿ ಮಗು ಮೃತಪಟ್ಟಿರುವುದಾಗಿ ಖಚಿತಪಡಿಸಲಾಗಿತ್ತು. ಬಳಿಕ ಮಗುವನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲು ಆಪರೇಶನ್ ಥಿಯೇಟರ್ಗೆ ಕೊಂಡುಹೋಗಲಿರುವ ಮಧ್ಯೆ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಹೃದಯಾಘಾತ ಮರಣಕ್ಕೆ ಕಾರಣವೆಂದು ಸಂಬಂಧಿಕರು ಹಾಗೂ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತದೇಹವನ್ನು ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ. ಮೃತ ಯುವತಿ ತಂದೆ, ತಾಯಿ, ಪತಿ, ಪುತ್ರಿ ಸಂಗೀತ, ಸಹೋದರರಾದ ರಮೇಶ್, ರಾಜೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.