ಹೈಮಾಸ್ಟ್ ಲೈಟ್ ಕಂಬಕ್ಕೆ ಢಿಕ್ಕಿ ಹೊಡೆದ ಟೆಂಪೋ ಟ್ರಾವಲರ್: ಹಲವರಿಗೆ ಗಾಯ
ಕಾಸರಗೋಡು: ಕಾಞಂಗಾಡ್ ಕೋಟಚ್ಚೇರಿ ಟ್ರಾಫಿಕ್ ಜಂಕ್ಷನ್ ನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ನಿಯಂತ್ರಣ ತಪ್ಪಿದ ಟೆಂಪೋ ಟ್ರಾವಲರ್ ಹೈಮಾಸ್ಟ್ ಲೈಟ್‌ನ ಕಂಬಕ್ಕೆ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಗುರುವಾಯೂರು ಕ್ಷೇತ್ರ ದರ್ಶನ ಮುಗಿಸಿ ಊರಿಗೆ ಮರಳುತ್ತಿದ್ದ ಪಾಲಕುನ್ನು ನಿವಾಸಿಗಳಿದ್ದ ಟೆಂಪೋ ಟ್ರಾವಲರ್ ಇಂದು ಮುಂಜಾನೆ ಅಪಘಾತಕ್ಕೀಡಾಗಿದೆ. ಯಾರೂ ಗಂಭೀರ ಗಾಯಗೊಂಡಿಲ್ಲವೆಂದು ತಿಳಿದು ಬಂದಿದೆ.