ಹೊಯ್ಗೆ ಸಾಗಾಟದ 2 ವಾಹನ ವಶಪಡಿಸಿದ ಕುಂಬಳೆ ಪೊಲೀಸರು: ಚಾಲಕರ ಬಂಧನ
ಕುಂಬಳೆ: ಹೊಯ್ಗೆ ಸಾಗಾಟ ನಡೆಸುತ್ತಿದ್ದ ಎರಡು ವಾಹನಗಳನ್ನು ಕುಂಬಳೆ ಪೊಲೀಸರು ವಶಪಡಿಸಿ ಚಾಲಕರನ್ನು ಸೆರೆ ಹಿಡಿದಿದ್ದಾರೆ. ಕರ್ನಾಟಕ ಭಾಗದಿಂದ ಬರುತ್ತಿದ್ದ ಟೋರಸ್ ಲಾರಿಯನ್ನು ಕುಂಬಳೆ ಹೆದ್ದಾರಿಯಿಂದ ವಶಪಡಿಸಿ ಚಾಲಕ ಅಬ್ದುಲ್ ರಜಾಕ್ ಎಣ್ಮಕಜೆ (39)ನನ್ನು ಸೆರೆ ಹಿಡಿದಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಏಸ್ ವಾಹನದಲ್ಲಿ ಹೊಯ್ಗೆ ಸಾಗಿಸುತ್ತಿದ್ದಾಗ ಮೊಗ್ರಾಲ್ ಮಸೀದಿ ಪರಿಸರದಿಂದ ವಾಹನವನ್ನು ಸೆರೆ ಹಿಡಿದು ಮೊಹಮ್ಮದ್ ಸಿದ್ದಿಕ್ (36)ನನ್ನು ಸೆರೆ ಹಿಡಿದಿದ್ದಾರೆ. ಎರಡೂ ವಾನಹನಗಳನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.