ಹೊಲಿಗೆದಾರರ ಸಂಘಟನೆ ಜಿಲ್ಲಾ ಸಮಾವೇಶ

ಕಾಸರಗೋಡು: ಕೇರಳ ರಾಜ್ಯ ಹೊಲಿಗೆದಾರರ ಸಂಘಟನೆ (ಕೆಎಸ್‌ಟಿಎ) ಜಿಲ್ಲಾ ಸಮಾವೇಶ ಹೊಸ ಬಸ್ ನಿಲ್ದಾಣದ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣ ದಲ್ಲಿ ನಡೆಯಿತು. ಸಂಘಟ ನೆಯ  ರಾಜ್ಯ ಸಮಿತಿ ಉಪಾಧ್ಯಕ್ಷ ಪಿ.ವಿ. ಜೇಕಬ್ ಪಾಲಕ್ಕಾಡ್ ಉದ್ಘಾಟಿಸಿ ದರು. ರಾಮನ್ ಚೆನ್ನಿಕ್ಕರ, ರುಕ್ಮಿಣಿ, ಯಶೋದ, ಶಂಕರನ್ ಅಣಂಗೂರು, ಭಾಸ್ಕರನ್, ಬಾಲಕೃಷ್ಣ ಶೆಟ್ಟಿ, ಒ.ವಿ. ಗಂಗಾಧರನ್, ಸತೀಶ್ ಆಚಾರ್ಯ ಮಾತನಾಡಿದರು. ಸುರೇಶ್ ಸಿ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು.  ಪಿ.ಯು. ಶಂಕರನ್ ಸಂಘಟನೆ ಬಗ್ಗೆ ಅವಲೋಕನ, ಕೋಶಾಧಿಕಾರಿ ಪದ್ಮನಾಭನ್ ಲೆಕ್ಕಪತ್ರ ಅವಲೋಕನ ನಡೆಸಿದರು. ರಾಧಾಕೃಷ್ಣ ಎಸ್ ನೀರ್ಚಾಲು ಸ್ವಾಗತಿಸಿ, ಉದಯನ್ ನಿರೂಪಿಸಿದರು. ಬಿಂದು ಕೆ.ವಿ ವಂದಿಸಿದರು.

RELATED NEWS

You cannot copy contents of this page