ಹೊಳೆಯಲ್ಲಿ ಸ್ನಾನಕ್ಕಿಳಿದ ಯುವಕ ನೀರಿನಲ್ಲಿ ಮುಳುಗಿ ಸಾವು

ಮುಳ್ಳೇರಿಯ: ಸ್ನಾನಕ್ಕೆಂದು ಹೊಳೆಗಿಳಿದ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಆದೂರು ಮಂಞಪಾರೆಯ ಕುಂಞಮ್ಮದ್-ದೈನಾಬಿ ದಂಪತಿಯ ಪುತ್ರ ಇಲ್ಯಾಸ್ (31) ಸಾವನ್ನಪ್ಪಿದ ಯುವಕ. ಇವರು ನಿನ್ನೆ ಸಂಜೆ ಮಂಞಪಾರೆಯ ಮೇತುಂಗಾಲ್ ಕಡವು ಎಂಬಲ್ಲಿ ಸ್ನಾನಕ್ಕಿಳಿದಿದ್ದರು. ಈ ವೇಳೆ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ನೀಡಿದ ಮಾಹಿತಿಯಂತೆ ಅಗ್ನಿಶಾಮಕ ದಳದ ಅಸಿಸ್ಟೆಂಟ್ ಸ್ಟೇಷನ್ ಆಫೀಸರ್ ಸಂತೋಷ್ ಕುಮಾರ್ ನೇತೃತ್ವದಲ್ಲಿ ಫಯರ್ ಆಂಡ್ ರೆಸ್ಕೂ ಆಫೀಸರ್‌ಗಳಾದ ಉಮ್ಮರ್ ಮಹಮ್ಮದ್, ಶಹದ್ ಮತ್ತು ಸ್ಥಳೀಯ ತಾಜುದ್ದೀನ್ ಎಂಬವರು ಶೋಧ ಕಾರ್ಯಾ ಚರಣೆಯಲ್ಲಿಪತ್ತೆಹಚ್ಚಿ ಮೇಲಕ್ಕೆತ್ತಿದರು. ಈ ವೇಳೆ ಇಲ್ಯಾಸ್ ಮೃತಪಟ್ಟಿದ್ದರು. ಮೃತದೇಹವನ್ನು  ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಇಂದು ಬೆಳಿಗ್ಗೆ ಮರಣೋತ್ತರ ಪರೀಕ್ಷೆ ಗೊಳಪಡಿಸಲಾಯಿತು.

ಮೃತರು ಸಹೋದರ-ಸಹೋದರಿಯರಾದ ನಾಸರ್, ರಸಾಕ್, ಲತೀಫ್ ಸಖಾಫಿ, ಸಾಜಿದ್ ಸಖಾಫಿ, ಫೌಸಿಯ, ನೂರ್‌ಜಾಬಿ, ಖೈರುನ್ನಿಸ, ಮಿಸ್ರಿಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.

RELATED NEWS

You cannot copy contents of this page