ಹೊಸಂಗಡಿಯಲ್ಲಿ ತಪಾಸಣಾ ಕೇಂದ್ರವಿಲ್ಲ: ಪರ್ಯಾಯವಾಗಿ  ಅಂತಾರಾಷ್ಟ್ರೀಯ ಮಟ್ಟದ ದಾರಿ ವಿಶ್ರಾಂತಿ ಕೇಂದ್ರ ನಿರ್ಮಾಣ

ಮಂಜೇಶ್ವರ: ಸಮನ್ವಿತ ವಾಹನ ತಪಾಸಣಾ ಕೇಂದ್ರಕ್ಕಾಗಿ  ಹೊಸಂಗಡಿ ಯಲ್ಲಿ ಮೀಸಲಿರಿಸಿದ ಪ್ರದೇಶದಲ್ಲಿ ಅದರ ಬದಲು ದಾರಿ ವಿಶ್ರಾಂತಿ ಕೇಂದ್ರ ಸ್ಥಾಪಿಸುವ ಬೃಹತ್ ಯೋ ಜನೆಗೆ ರಾಜ್ಯ ಸರಕಾರ ರೂಪು ನೀಡಿದೆ. ನಿನ್ನೆ ಸೇರಿದ ರಾಜ್ಯ ಸಚಿವ ಸಂಪುಟ ಸಭೆ ಯಲ್ಲಿ ಈ ತೀರ್ಮಾನ ಕೈಗೊಳ್ಳಲಾ ಗಿದೆ. ಇದಕ್ಕೆ ಅಗತ್ಯದ ಭೂಮಿ ಹಸ್ತಾಂತರವೂ ಈಗಾಗಲೇ ನಡೆದಿದೆ.

ಸರಕು ಸೇವಾ ತೆರಿಗೆ (ಜಿಎಸ್‌ಟಿ) ಸಂಪ್ರ ದಾಯ ಜ್ಯಾರಿಗೊಂಡ ಹಿನ್ನೆಲೆಯಲ್ಲಿ ಹೊಸಂಗಡಿಗೆ ಸಮೀಪ ಈ ಹಿಂದೆ ಕಾರ್ಯವೆಸಗುತ್ತಿದ್ದ ಮಾರಾಟ ತೆರಿಗೆ ವಸೂಲಿ ತಪಾಸಣಾ ಕೇಂದ್ರ ಕಾರ್ಯ ಚಟುವಟಿಕೆಗಳನ್ನು ಬಳಿಕ ಅಲ್ಲಿಗೇ ಕೊನೆಗೊಳಿಸಲಾಗಿತ್ತು. ಈ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಪರಿಸರದಲ್ಲಿ ಮಾರಾಟ ತೆರಿಗೆ ಇಲಾಖೆಯ  ಒಂಭತ್ತು ಎಕ್ರೆಗಿಂತಲೂ ಹೆಚ್ಚು ಸ್ಥಳವಿದ್ದು, ಅದರಲ್ಲಿ ಐದು ಎಕ್ರೆ ಯಲ್ಲಿ ದಾರಿವಿಶ್ರಾಂತಿ ಕೇಂದ್ರ ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಆ ಜಾಗವನ್ನು ವಿಶ್ರಾಂತಿ ಕೇಂದ್ರದ ಸ್ಥಾಪನೆಗಾಗಿ ಈಗಾಗಲೇ ಹಸ್ತಾಂತರಿಸ ಲಾಗಿದೆ.  ಈ ಜಾಗದಲ್ಲಿ ಓವರ್‌ಸೀಸ್ ಇನ್‌ವೆಸ್ಟ್‌ಮೆಂಟ್ ಆಂಡ್ ಹೋಲ್ಡಿಂಗ್ಸ್ ಲಿಮಿಟೆಡ್ (ಸಾಗರೋ ತ್ತರ ಹೂಡಿಕೆ ಮತ್ತು ಹಿಡುವಳಿ ನಿಯಮಿತ )ನ ಆರ್ಥಿಕ ನೆರವಿನಿಂದ  ಅಂತಾರಾ ಷ್ಟ್ರೀಯ ಮಟ್ಟದ ವಿಶ್ರಾಂತಿ ಕೇಂದ್ರ ನಿರ್ಮಿಸಲಾಗು ವುದು. ಮಂಜೇಶ್ವರದ ಹೊರತಾಗಿ ರಾಜ್ಯದ ಇತರ ೩೦ ಪ್ರದೇಶಗಳಲ್ಲೂ ಇಂತಹ ಅಂತಾರಾಷ್ಟ್ರೀಯ ದಾರಿ ವಿಶ್ರಾಂತಿ ಕೇಂದ್ರಗಳ ಶೃಂಗ (ರೆಸ್ಟ್ ಸ್ಟೋಪ್)ಗಳನ್ನು ನಿರ್ಮಿಸಲಾಗು ವುದು. ಇಂತಹ ವಿಶ್ರಾಂತಿ ಕೇಂದ್ರ ಗಳಲ್ಲಿ ರೆಸ್ಟೋರೆಂಟ್, ಸಭಾಂಗಣ ಇತ್ಯಾದಿ ಸೌಕರ್ಯಗಳೂ ಒಳಗೊಳ್ಳ ಲಿದೆ. ಸಾಗರೋತ್ತರ ಹೂಡಿಕೆ ಮತ್ತು ಹಿಡುವಳಿ ನಿಯಮಿತ ಮತ್ತು ರಾಜ್ಯ ಸರಕಾರ ಸಂಯುಕ್ತವಾಗಿ ಜ್ಯಾರಿಗೊಳಿ ಸುವ ಯೋಜನೆಯಾಗಿದೆ ಇದು.

RELATED NEWS

You cannot copy contents of this page