ಹೊಸಪೇಟೆಯಲ್ಲಿ ಭೀಕರ ಅಪಘಾತ ೭ ಮಂದಿ ಮೃತ್ಯು

ಬೆಂಗಳೂರು: ಕರ್ನಾಟಕದ ಹೊಸಪೇಟೆ ಬಳಿ ನಿನ್ನೆ ಸಂಭವಿಸಿದ ವಾಹನ ಅಪಘಾತದಲ್ಲಿ ೭ ಮಂದಿ ಸಾವನ್ನಪ್ಪಿದ್ದಾರೆ. ಹೊಸಪೇಟೆ ಹೊರವಲಯದ ವ್ಯಾಸನಕೇರಿ ಬಳಿ ಎರಡು ಲಾರಿ ಹಾಗೂ ಕ್ರೂಸರ್ ವಾಹನ ಮಧ್ಯೆ ಅಪಘಾತವುಂ ಟಾಗಿದೆ. ದೇವಸ್ಥಾನಕ್ಕೆ ಹೋಗಿ ಮನೆಗೆ ಮರಳುತ್ತಿದ್ದವರ ವಾಹನ ಅಪಘಾತದಲ್ಲಿ ಸಿಲುಕಿಕೊಂಡಿದ್ದು, ಅದರಲ್ಲಿದ್ದ ಒಂದೇ ಕುಟುಂಬದ ೭ ಮಂದಿ ಮೃತಪಟ್ಟಿದ್ದಾರೆ. ಇಬ್ಬರೂ ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟವರು ಹೊಸಪೇಟೆ ಉಕ್ಕಡಕೇರಿ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You cannot copy content of this page