ಹೊಸ ನಿಲ್ದಾಣ ಬಳಿ ವ್ಯಕ್ತಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾಸರಗೋಡು ಹೊಸ ಬಸ್ ನಿಲ್ದಾಣ ಕಟ್ಟಡದ ಮೇಲಿನ ಅಂತಸ್ತಿನ ಆವರಣದಲ್ಲಿ ನಿನ್ನೆ ವ್ಯಕ್ತಿಯೋರ್ವರು ಸಾವನ್ನಪ್ಪಿದ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ.

ಮೃತರಿಗೆ ಸುಮಾರು 50ರಿಂದ 60ರ ಮಧ್ಯೆ ಪ್ರಾಯ ಅಂದಾಜಿಸ ಲಾಗುತ್ತಿದೆ. ಮೃತರನ್ನು ಕರ್ನಾಟಕ ನಿವಾಸಿ ಲಿಂಗಪ್ಪ ಎಂಬುದಾಗಿ ಗುರುತಿಸಲಾಗಿದೆ.  ಇವರು ಕಳೆದ 15 ವರ್ಷಗಳಿಂದ ನಗರದ ಕೋಟೆಕಣಿಯಲ್ಲಿ ವಾಸಿಸಿ ಕೂಲಿ ಕೆಲಸ ಮಾಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಮರಣೋತ್ತರ ವರದಿ ಲಭಿಸಿದ ಬಳಿಕವಷ್ಟೇ ಸಾವಿನ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page