ಹೊಸ ಬಸ್ ನಿಲ್ದಾಣದಲ್ಲಿ ಕಣ್ಮುಚ್ಚಿದ ಹೈಮಾಸ್ಟ್ ದೀಪ: ದುರಸ್ತಿಗೆ ಕ್ರಮವಿಲ್ಲ
ಕಾಸರಗೋಡು: ಹೊಸ ಬಸ್ ನಿಲ್ದಾಣದ ನೇತಾಜಿ ಆಟೋರಿಕ್ಷಾ ಸ್ಟಾಂಡ್ ಬಳಿಯಿರುವ ಹೈಮಾಸ್ಟ್ ಲೈಟ್ ಕಣ್ಣುಮುಚ್ಚಿ ಒಂದು ವರ್ಷ ಕಳೆದರೂ ಅಧಿಕಾರಿಗಳು ಅದನ್ನು ದುರಸ್ತಿಗೊಳಿಸಲು ಮುಂದಾಗಲಿಲ್ಲ ವೆಂದು ಸ್ಥಳೀಯರು ದೂರಿದ್ದಾರೆ. ಟ್ಯಾಕ್ಸಿ ಸ್ಟಾಂಡ್, ಜನವಾಸ ಕೇಂದ್ರವಾಗಿರುವ ಈ ಪ್ರದೇಶದಲ್ಲಿ ರಾತ್ರಿ ಕಾಲದಲ್ಲಿ ಕತ್ತಲಾವರಿಸುತ್ತಿದ್ದು, ಇದರಿಂದಾಗಿ ವ್ಯಾಪಾರಿಗಳು, ಚಾಲಕರು, ಸಂಚಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆಂದು ಸ್ಥಳೀಯರು ತಿಳಿಸುತ್ತಾರೆ. ಅಲ್ಲದೆ ರಾತ್ರಿ ಸಮಾಜದ್ರೋಹಿಗಳ ಕಿರುಕುಳ ಇಲ್ಲಿ ತೀವ್ರಗೊಂಡಿದ್ದು, ಅಧಿಕಾರಿಗಳು ಶೀಘ್ರವೇ ದೀಪವನ್ನು ಉರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. 2 ವರ್ಷದ ಹಿಂದೆ ಸ್ಥಾಪಿಸಿದ ಈ ಹೈಮಾಸ್ಟ್ ದೀಪ ಒಂದು ವರ್ಷ ಕಾಲ ಉರಿದಿದ್ದು ಬಳಿಕ ಕಣ್ಮುಚ್ಚಿದೆ. ಆದರೂ ದುರಸ್ತಿಗೆ ಮುಂದಾಗದಿರುವುದು ಸ್ಥಳೀಯರಿಗೆ ಸಮಸ್ಯೆ ತಂದಿಟ್ಟಿದೆ.