ಹೋಮ್‌ಸ್ಟೇಯಲ್ಲಿ ಮಧ್ಯರಾತ್ರಿ ಯುವತಿ ಮಾನಭಂಗಕ್ಕೆ ಯತ್ನ: ಕೊಲೆ ಪ್ರಕರಣ ಆರೋಪಿ ಸಹಿತ ಇಬ್ಬರ ಬಂಧನ

ಕಾಸರಗೋಡು: ಉದುಮ ಕಾಪಿಲ್‌ನ ಹೋಮ್‌ಸ್ಟೇಯಲ್ಲಿ ಯುವತಿಯನ್ನು ಬೆದರಿಸಿ ಮಾನಭಂಗ ಪಡಿಸಲು ಯತ್ನ ನಡೆದಿದೆ. ಘಟನೆಯಲ್ಲಿ ಕೇಸು ದಾಖಲಿಸಿದ ಬೇಕಲ ಪೊಲೀಸರು ಕೊಲೆ ಪ್ರಕರಣದ ಆರೋಪಿ ಸಹಿತ ಇಬ್ಬರನ್ನು ಬಂಧಿಸಿದ್ದಾರೆ. ಬಾರ, ಎರೋಳ್ ಕುನ್ನುಮಲ್‌ನ ಮೊಹಮ್ಮದ್ ಇರ್ಷಾದ್ (28), ಎರೋಲ್ ಹೌಸ್‌ನ ಎನ್.ಎಸ್. ಅಬ್ದುಲ್ಲ (29) ಎಂಬಿವರನ್ನು ಬೇಕಲ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ಶೈನ್ ಹಾಗೂ ತಂಡ ಬಂಧಿಸಿದೆ.

ಸೋಮವಾರ ರಾತ್ರಿ ಕೇಸಿಗೆ ಆಸ್ಪದವಾದ ಘಟನೆ ನಡೆದಿತ್ತು. ಉದ್ಯೋಗ ನಿಮಿತ್ತವಾಗಿ ತೆಂಕಣ ಜಿಲ್ಲೆಯಿಂದ ತಲುಪಿದ ಯುವತಿಯ ದೂರಿನಂತೆ ಇವರಿಬ್ಬರನ್ನು ಬಂಧಿಸಲಾ ಗಿದೆ. ಮಧ್ಯರಾತ್ರಿಯಲ್ಲಿ ಯುವತಿಗೆ ಫೋನ್ ಕರೆ ಮಾಡಿ ಬೆದರಿಸಿರುವು ದಾಗಿಯೂ ಹೇಳ ಲಾಗುತ್ತಿದೆ. ಸತತವಾಗಿ ಕರೆ ಮಾಡಿ ಉಪಟಳ ನೀಡಿ ದಾಗ ಫೋನ್ ಬ್ಲೋಕ್ ಮಾಡಿದ್ದಾ ರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇವರಿಬ್ಬರು ಹೋಮ್‌ಸ್ಟೇಗೆ ತಲುಪಿ ಯುವತಿ ವಾಸವಿದ್ದ ಕೊಠಡಿಯ ಬಾಗಿಲು ತಟ್ಟಿ ಅಶ್ಲೀಲವಾಗಿ ಬೈದಿದ್ದಾ ರೆನ್ನಲಾಗಿದೆ. ಇದರಿಂದಾಗಿ ಯುವತಿ ರಿಸೆಪ್ಶನ್‌ನಲ್ಲೂ, ಪೊಲೀಸರ 112  ನಂಬ್ರಕ್ಕೂ ಕರೆ ಮಾಡಿ ಮಾಹಿತಿ ನೀಡಿದ್ದಳು. ಆ ಬಳಿಕ ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿಗಳಿಬ್ಬರನ್ನು ಕಸ್ಟಡಿಗೆ ತೆಗೆದಿದ್ದಾರೆ.  ನಿನ್ನೆ ಯುವತಿ ಪೊಲೀಸ್ ಠಾಣೆಗೆ ನೇರವಾಗಿ ತಲುಪಿ ದೂರು ನೀಡಿದ ಹಿನ್ನೆಲೆಯಲ್ಲಿ ಇವರಿಬ್ಬರ ವಿರುದ್ಧ ಕೇಸು ದಾಖಲಿಸಿ ಬಂಧಿಸ ಲಾಗಿದೆ. ಆರೋ ಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 2 ವಾರ ಇವರಿಗೆ ನ್ಯಾಯಾಂಗ ಬಂಧನವಿಧಿಸಲಾಗಿದೆ.

2015 ಮೇ 12ರಂದು ರಾತ್ರಿ ಉದುಮ ಕಣ್ಣಂಕುಳದಲ್ಲಿ ಶಾಹುಲ್ ಹಮೀದ್ ಎಂಬ ಯುವಕನನ್ನು ಇರಿದು ಕೊಂದು ಸಹೋದರ ಬಾದುಷರಿಗೆ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಮುಹಮ್ಮದ್ ಇರ್ಷಾದ್ ಎಂದು ಪೊಲೀಸರು ತಿಳಿಸಿದ್ದಾರೆ. ಉದುಮ ಪಡಿಂಞಾರ್‌ನ ಮರಣ ಸಂಭವಿಸಿದ ಮನೆಗೆ  ಬೈಕ್‌ನಲ್ಲಿ ತೆರಳುತ್ತಿದ್ದ ಮಧ್ಯೆ ತಡೆದು ನಿಲ್ಲಿಸಿ ಆಕ್ರಮಿಸಿರುವುದಾಗಿ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಇರ್ಷಾದ್ ಸಹಿತ ಇರುವ 8 ಆರೋಪಿಗಳನ್ನು ಜಿಲ್ಲಾ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ (3) ದೋಷರಹಿತರೆಂದು ಘೋಷಿಸಿತ್ತು. ಇದರ ವಿರುದ್ಧ ಪ್ರೋಸಿಕ್ಯೂಷನ್ ನೀಡಿದ ಅಪೀಲು ಹೈಕೋರ್ಟ್‌ನಲ್ಲಿ ಪರಿಗಣನೆಯಲ್ಲಿದೆ.

You cannot copy contents of this page