೧೯ ದಿನಗಳ ಹಿಂದೆ ವಿವಾಹವಾದ ಯುವತಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಹತ್ತೊಂಬತ್ತು ದಿನಗಳ ಹಿಂದೆಯಷ್ಟೇ  ವಿವಾಹವಾದ ಯುವತಿ ಮನೆಯೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಉಕ್ಕಿನಡ್ಕದ ಜಾಫರ್ ತಾಜು ದ್ದೀನ್ ಎಂಬವರ ಪತ್ನಿ ಉಮೈರಾ ಬಾನು (೨೨) ಸಾವನ್ನಪ್ಪಿದ ಯುವತಿ. ನಿನ್ನೆ ಬೆಳಿಗ್ಗೆ ಗಂಟೆ ೧೧- ೧೧.೧೦ರ ಮಧ್ಯೆ ಘಟನೆ ನಡೆದಿದೆಯೆಂದು  ಬದಿಯಡ್ಕ ಪೊಲೀಸರು ಈ ಬಗ್ಗೆ ದಾಖ ಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ನಿನ್ನೆ ಬೆಳಿಗ್ಗೆ ಕುಟುಂಬದ ಇತರ ಸದಸ್ಯರು ಮನೆಯಿಂದ ಹೊರಹೋಗಿದ್ದರು. ಆಗ ಉಮೈರಾ ಬಾನು ಹಾಗೂ ಪತಿ ಜಾಫರ್ ತಾಜುದ್ದೀನ್ ಮಾತ್ರವೇ ಮನೆಯಲ್ಲಿದ್ದರು. ೧೧ ಗಂಟೆಗೆ  ಅನಂತರ ಜಾಫರ್  ತಾಜುದ್ದೀನ್ ಕೂಡಾ ಮನೆಯಿಂದ ಹೊರಗೆ ಹೋಗಿದ್ದು  ೧೦ ನಿಮಿಷಗಳ ಬಳಿಕ ಮರಳಿ ಮನೆಗೆ ಬಂದಿದ್ದಾರೆ. ಈವೇಳೆ ಉಮೈರಾಬಾನು ಮನೆಯ ಮಲಗುವ ಕೊಠಡಿಯೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ.  ಕೂಡಲೇ ಆಕೆಯನ್ನು ಉಕ್ಕಿನಡ್ಕದ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ವೈದ್ಯರು ನಡೆಸಿದ ತಪಾ ಸಣೆ ವೇಳೆ ಸಾವು ಖಚಿತಪಡಿಸಲಾಗಿದೆ.  ಬದಿಯಡ್ಕ ಪೊಲೀಸರು   ಮಹಜರು ನಡೆಸಿ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ.  ಉಮೈರಾಬಾನು ಮತ್ತು ಜಾಫರ್‌ತಾಜುದ್ದೀನ್‌ರದ್ದು ಪ್ರೇಮ ವಿವಾಹವಾಗಿತ್ತು.

ಜಾಫರ್ ತಾಜುದ್ದೀನ್ ಶೀಘ್ರ ಗಲ್ಫ್‌ಗೆ ಹೋಗಲು ನಿರ್ಧರಿಸಿದ್ದರು. ಇದರಿಂದ ಮನನೊಂದು ಉಮೈ ರಾಬಾನು ಆತ್ಮಹತ್ಯೆಗೈದಿರಬಹುದೆಂದು ಸಂಶಯಿಸಲಾಗಿದೆ. ಜಾಫರ್ ತಾಜು ದ್ದೀನ್‌ರ ಮನೆಯ ಅಲ್ಪ ದೂರದಲ್ಲೇ ಉಮೈರಾಬಾನುವಿನ ತವರುಮನೆ ಇದೆಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page