ಅಂಗಡಿಗೆ ಬಂದ ಬಾಲಕಿ ಮೇಲೆ ಕಿರುಕುಳ ಯತ್ನ ಮುಸ್ಲಿಂಲೀಗ್ ಪ್ರಾದೇಶಿಕ ನೇತಾರ ವ್ಯಾಪಾರಿ ಸೆರೆ

ಮಂಜೇಶ್ವರ: ಸಾಮಗ್ರಿ ಖರೀದಿಸಲೆಂದು ಅಂಗಡಿಗೆ ಬಂದ ಬಾಲಕಿ ಮೇಲೆ ಕಿರುಕುಳ ನೀಡಲೆ ತ್ನಿಸಿದ ಪ್ರಕರಣದಲ್ಲಿ ಆರೋಪಿಯಾದ ವ್ಯಾಪಾರಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಕುಂಜತ್ತೂರು ಕಣ್ವತೀರ್ಥ ನಿವಾಸಿಯೂ, ಮುಸ್ಲಿಂ ಲೀಗ್‌ನ ಪ್ರಾದೇಶಿಕ ನೇತಾರನಾದ ಇಬ್ರಾಹಿಂ ಶೇಕ್ ಅಬ್ಬ (60) ಎಂಬಾತ ಬಂಧಿತ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈತನ ಅಂಗಡಿಯಿಂದ ಸಾಮಗ್ರಿ ಖರೀದಿಸಲೆಂದು 11ರ ಹರೆಯದ ಬಾಲಕಿಯೋರ್ವೆ ಶನಿವಾರ ಬೆಳಿಗ್ಗೆ ತಲುಪಿದ್ದಳೆನ್ನಲಾಗಿದೆ. ಈ ವೇಳೆ ಬಾಲಕಿ ಮೇಲೆ ಆರೋಪಿ ಕಿರುಕುಳ ನೀಡಲೆತ್ನಿಸಿರುವುದಾಗಿ ದೂರಲಾಗಿದೆ.  ಆದರೆ ಭಯದಿಂದ ಬಾಲಕಿ ವಿಷಯ ವನ್ನು ಯಾರಲ್ಲೂ ತಿಳಿಸಿರಲಿಲ್ಲ. ಆದರೆ ಅಂದು ಸಂಜೆ ಬಾಲಕಿಗೆ ಜ್ವರ ಅನುಭವಗೊಂಡಿತ್ತು. ದಿಢೀರ್ ಜ್ವರ ಕಂಡುಬಂದುದರಿಂದ ಮನೆಯವರು ಪ್ರಶ್ನಿಸಿದಾಗ ಬಾಲಕಿ ತನಗುಂಟಾದ ಕೆಟ್ಟ ಅನುಭವವನ್ನು ತಿಳಿಸಿದ್ದಳು. ಈಬಗ್ಗೆ ಮನೆಯವರು ಆದಿತ್ಯವಾರ ಬೆಳಿಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಇಬ್ರಾಹಿಂ ಶೇಕ್ ಅಬ್ಬನ ವಿರುದ್ಧ ಪೋಕ್ಸೋ ಕೇಸು ದಾಖಲಿಸಿಕೊಂಡ ಪೊಲೀ ಸರು ಆತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾ ಲಯದಲ್ಲಿ ಹಾಜರುಪಡಿಸಿದ್ದು ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ.

You cannot copy contents of this page