ಅಂಗಡಿ ತೆರವುಗೊಳಿಸುವಂತೆ ದೂರು ನೀಡಿದ ದ್ವೇಷ : ಟಿನ್ನರ್ ಆಯಿಲ್ ಸುರಿದು ಕಿಚ್ಚಿರಿಸಿ ಗಂಭೀರ ಸುಟ್ಟು ಗಾಯಗೊಂಡ ಯುವತಿ ಮೃತ್ಯು; ಆರೋಪಿ ಸೆರೆ
ಕಾಸರಗೋಡು: ಅಂಗಡಿ ತೆರವುಗೊಳಿಸುವಂತೆ ದೂರು ನೀಡಿದ ದ್ವೇಷದಿಂದ ವ್ಯಕ್ತಿಯೋರ್ವ ಜೀನಸು ಅಂಗಡಿ ಮಾಲಕಿಯಾದ ಯುವತಿ ಯ ಮೇಲೆ ಟಿನ್ನರ್ ಆಯಿಲ್ ಎರಚಿ ಕಿಚ್ಚಿರಿಸಿದ ಪರಿಣಾಮ ಗಂಭೀರ ಸುಟ್ಟು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬೇಡಡ್ಕಕ್ಕೆ ಸಮೀಪದ ಮಣ್ಣಡ್ಕ ದಲ್ಲಿ ಜೀನಸು ಅಂಗಡಿ ನಡೆಸುತ್ತಿರುವ ಮುನ್ನಾಡ್ ಪೆರ್ಯಾ ನಿವಾಸಿ ರಮಿತ (27) ಸಾವನ್ನಪ್ಪಿದ ಯುವತಿ.
ಇದಕ್ಕೆ ಸಂಬಂಧಿಸಿ ರಮಿತಳ ಜೀನಸು ಅಂಗಡಿ ಸಮೀಪ ಪೀಠೋ ಪಕರಣ ಅಂಗಡಿ ನಡೆಸುತ್ತಿರುವ ತಮಿಳುನಾಡು ಚಿನ್ನಪಟ್ಟಣಂ ನಿವಾಸಿ ರಾಮಾಮೃತಂ(57)ಎಂಬಾತನನ್ನು ಬೇಡಗಂ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಮದ್ಯಪಾನಿಯಾದ ಈತ ಕಳೆದ ೨೫ ವರ್ಷಗಳಿಂದ ಮುನ್ನಾಡ್ ಮತ್ತು ಪಳತ್ತುಂಗಾಲ್ ಎಂಬಿಡೆಗಳ ಬಾಡಿಗೆ ಕೊಠಡಿಯಲ್ಲಿ ವಾಸಿಸಿ ಪೀ ಠೋಪಕರಣಗಳನ್ನು ತಯಾರಿಸಿಕೊಡು ತ್ತಿದ್ದನು. ನಿತ್ಯ ಕುಡುಕನಾಗಿರುವ ಆರೋಪಿ ರಾಮಾಮೃತಂ ಮದ್ಯದಮಲಿ ನಲ್ಲಿ ರಮಿತಾಳಿಗೆ ಕಿರುಕುಳ ನೀಡುತ್ತಿದ್ದ ನೆನ್ನಲಾಗಿದೆ. ಆ ಬಗ್ಗೆ ಆತ ನಡೆಸುತ್ತಿದ್ದ ಅಂಗಡಿಯ ಕಟ್ಟಡ ಮಾಲಕನಿಗೆ ರಮಿತ ದೂರು ನೀಡಿದ್ದರು. ಅದರಂತೆ ಅಂಗಡಿ ತೆರವುಗೊಳಿಸುವಂತೆ ಕಟ್ಟಡ ಮಾಲಕ ರಾಮಾಮೃತಂಗೆ ತಿಳಿಸಿದ್ದರು. ಆ ದ್ವೇಷದಿಂದ ಆರೋಪಿ ಪೀಠೋಪಕರಣ ಸಾಮಗ್ರಿಗಳಿಗೆ ಬಳಸಲಾಗುತ್ತಿರುವ ಟಿನ್ನರ್ ಆಯಿಲ್‌ನೊಂದಿಗೆ ಎಪ್ರಿಲ್ ೮ರಂದು ಅಪರಾಹ್ನ 3.30ರ ವೇಳೆ ಮದ್ಯದಮಲಿನಲ್ಲಿ ರಮಿತಳ ಅಂಗಡಿಗೆ ನುಗ್ಗಿ ರಮಿತರ ದೇಹಕ್ಕೆ ಆಯಿಲ್ ಎರಚಿ, ಬೆಂಕಿಹಚ್ಚಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆ ವೇಳೆ ಆಂಗಡಿಯಲ್ಲಿ ರಮಿತಾರ ಎಂಟು ವರ್ಷ ಪ್ರಾಯದ ಮಗ ಹಾಗೂ ಆತನ ಸಹಪಾಠಿಯೂ ಇದ್ದರು. ಅವರಿಬ್ಬರೂ ಕೂದಲೆಳೆಯ ಅಂತರದಲ್ಲಿ ಸಂಭಾವ್ಯ ಅನಾಹುತದಿಂದ ಪಾರಾಗಿದ್ದಾರೆ. ಯುವತಿ ದೇಹಕ್ಕೆ ಬೆಂಕಿ ತಗಲಿದುದನ್ನು ಕಂಡ ಪಕ್ಕದವರು ಅಲ್ಲಿಗೆ ಬಂದು ರಕ್ಷಾ ಕಾರ್ಯಾಚರಣೆ ನಡೆಸಿದರು. ಇದೇ ಸಂದರ್ಭದಲ್ಲಿ ಆ ದಾರಿಯಾಗಿ ಕಾರಿನಲ್ಲಿ ಸಾಗುತ್ತಿದ್ದ ಇಬ್ಬರು ಕಾರು ನಿಲ್ಲಿಸಿ ಅದರಲ್ಲಿ ರಮಿತಳನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಉನ್ನತ ಮಟ್ಟದ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ರಮಿತ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ.
ರಮಿತಾರ ದೇಹಕ್ಕೆ ಕಿಚ್ಚಿರಿಸಿದ ಬಳಿಕ ಆರೋಪಿ ತಕ್ಷಣ ಅಲ್ಲಿಂದ ಬಸ್ಸೇರಿ ಪರಾರಿಯಾಗಲು ಯತ್ನಿಸಿದ್ದನು. ವಿಷಯ ತಿಳಿದ ಬಸ್ಸಿನ ಕಾರ್ಮಿಕರು ಮತ್ತು ಇತರರು ಸೇರಿ ಆತನನ್ನು ಹಿಡಿದು ಅಂದೇ ಬೇಡಗಂ ಪೊಲೀಸರಿಗೆ ಒಪ್ಪಿಸಿದ್ದರು. ಅದರಂತೆ ಪೊಲೀಸರು ಆರೋಪಿಯ ವಿರುದ್ಧ ಮೊದಲು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ರಮಿತ ಇಂದು ಬೆಳಿಗ್ಗೆ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗುವು ದೆಂದು ಪೊಲೀಸರು ತಿಳಿಸಿದ್ದಾರೆ.
ಬೇಡಗಂ ಪೊಲೀಸರು ಮಂಗಳೂರಿನ ಆಸ್ಪತ್ರೆಗೆ ಸಾಗಿ ಶವ ಮಹಜರು ನಡೆಸಿದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಊರಿಗೆ ತರುವ ತಯಾರಿ ನಡೆಸಲಾಗುತ್ತಿದೆ.