ಅಂಗಡಿ ವರಾಂಡದಲ್ಲಿ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ನೀರ್ಚಾಲು: ಕೂಲಿ ಕಾರ್ಮಿಕ ನಾದ ಯುವಕನೋರ್ವ  ಅಂಗಡಿ ಮುಂಭಾಗದಲ್ಲಿ  ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುಳ್ಯ ಸೋಣಂಗೇರಿ ನಿವಾಸಿ  ಪ್ರಸ್ತುತ ನೀರ್ಚಾಲು ಸಮೀಪ ಬಿರ್ಮಿನಡ್ಕದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ರಾಜನ್ (49) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ೩ ಗಂಟೆ ವೇಳೆ ಇವರು ಏಣಿಯರ್ಪು ಸಮೀಪ ಅಂಗಡಿಯೊಂದರ  ಬಳಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು,   ಈ ಬಗ್ಗೆ ಸ್ಥಳೀಯರು ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ   ಪೊಲೀಸರು ಸ್ಥಳಕ್ಕೆ ತಲುಪಿಲ್ಲವೆನ್ನ ಲಾಗಿದೆ.   ರಾತ್ರಿ ೧೦ ಗಂಟೆ ವೇಳೆಗೆ  ಆ ಮೂಲಕ ಸಂಚರಿಸುತ್ತಿದ್ದವರು ರಾಜನ್‌ರನ್ನು ಪರಿಶೀಲಿಸಿದಾಗ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ವಿಷಯವನ್ನು ಅವರು ಬದಿಯಡ್ಕ ಪೊಲೀಸರಿಗೆ ತಿಳಿಸಿದ್ದರು. ಅನಂತರ ಪೊಲೀಸರು ತಲುಪಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.  ಘಟನೆ ಬಗ್ಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿ ದ್ದಾರೆ.  ಕಾಞಂಗಾಡ್ ಮಾವುಂಗಾಲ್ ನಿವಾಸಿ  ದಿ| ಅಂಬು-ಕಲ್ಯಾಣಿ ದಂಪತಿಯ ಪುತ್ರನಾದ ಮೃತರು  ಪತ್ನಿ ಜಯಶೀಲ, ಮಕ್ಕಳಾದ ಸಂಧ್ಯಾ, ವಿದ್ಯಾ, ಅಭಿಷೇಕ್, ಅಳಿಯಂದಿರಾದ ಕೃಷ್ಣನ್, ಪ್ರಭಾಕರನ್, ಸಹೋದರ ಅಶೋಕ್ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page