ಅಂಗನವಾಡಿಯಲ್ಲಿ ಕುಸಿದುಬಿದ್ದು ಬಾಲಕಿ ಮೃತ್ಯು
ಮಧೂರು: ಅಂಗನವಾಡಿಯಲ್ಲಿ ಕುಸಿದುಬಿದ್ದು ನಾಲ್ಕರ ಹರೆಯದ ಬಾಲಕಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಧೂರು ಅರಂತೋಡಿನ ಬಷೀರ್-ಅಫ್ಸ ದಂಪತಿಯ ಪುತ್ರಿ ಫಾತಿಮತ್ ಸಹರ (4) ಮೃತಪಟ್ಟ ಬಾಲಕಿ. ನಿನ್ನೆ ಬೆಳಿಗ್ಗೆ ಅಂಗನವಾಡಿ ಯಲ್ಲಿ ತಲೆಸುತ್ತಿ ಬಿದ್ದ ಬಾಲಕಿಯನ್ನು ಕೂಡಲೇ ಚೆಂಗಳದ ಇ.ಕೆ. ನಾಯ ನಾರ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ಚಿಕಿತ್ಸೆ ಮಧ್ಯೆ ರಾತ್ರಿ ವೇಳೆ ನಿಧನ ಸಂಭವಿಸಿದೆ.
ಜ್ವರ ಉಲ್ಭಣಗೊಂಡಿರುವುದೇ ಸಾವಿಗೆ ಕಾರಣವೆಂದು ವೈದ್ಯರು ಮನೆಯವರಲ್ಲಿ ತಿಳಿಸಿದ್ದಾರೆ. ಫಾತಿಮತ್ ಸಹರಾಳ ಅಕಾಲಿಕ ನಿಧನ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಮೃತದೇಹವನ್ನು ಅರಂ ತೋಡು ಜುಮಾ ಮಸೀದಿ ಪರಿ ರದಲ್ಲಿ ಅಂತ್ಯಸಂಸ್ಕಾರ ನಡೆಸ ಲಾಯಿತು. ಗಲ್ಫ್ ಉದ್ಯೋಗಿಯಾಗಿ ರುವ ಬಷೀರ್ ಕಿವಿ ಚುಚ್ಚುವ ಕಾರ್ಯಕ್ರಮಕ್ಕಾಗಿ ಒಂದು ತಿಂಗಳ ಹಿಂದೆ ಊರಿಗೆ ಬಂದಿದ್ದರು.