ಅಂತಾರಾಜ್ಯ ವಾಹನ ಕಳವು ಜಾಲದ ಇಬ್ಬರ ಸೆರೆ

ಕಾಸರಗೋಡು:  ವಿದ್ಯಾನಗರ ಪೊಲೀಸರು ಮಾಯಿಪ್ಪಾಡಿಯಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಅಂತಾರಾಜ್ಯ ವಾಹನ ಕಳವು ಜಾಲಕ್ಕೆ ಸೇರಿದ ಇಬ್ಬರನ್ನು ಬಂಧಿಸಿದ್ದಾರೆ.  ಮಂಗಳೂರು ಗುಡ್ಡೆಕಣ್ಣೂರು ಬಳ್ಳೂರು ನಿವಾಸಿ ಮೊಹಮ್ಮದ್  ಅಲ್‌ಫಾಸ್ (24) ಮತ್ತು ಮಂಗಳೂರು  ಪಂಜಿಮೊಗರು ಮಂಜೋಟಿ ಮಸೀದಿ ರಸ್ತೆ ಬಳಿಯ ಮುಸಾಂಬಿಲ್ ಹುಸೈನ್ (20) ಬಂಧಿತರಾದ ಆರೋಪಿಗಳು.

ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಬಿನೋಯ್ ಕೆ.ಜೆ ಅವರ ಮೇಲ್ನೋಟದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ  ದೀಪ್ತಿ ವಿ.ವಿ ನೇತೃತ್ವದ ಪೊಲೀಸರು ಮಾಯಿ ಪ್ಪಾಡಿಯಲ್ಲಿ ನಿನ್ನೆ ಈ ಕಾರ್ಯಾ ಚರಣೆ ನಡೆಸಿ ಇವರಿಬ್ಬರನ್ನು ಬಂಧಿಸಿ ದ್ದಾರೆ. ಕಳವುಗೈದ ಬೈಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರೋಜನ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಶಿನೋಯ್, ಅಬ್ದುಸಲಾಂ ಮತ್ತು ಕೃಷ್ಣನುಣ್ಣಿ ಎಂಬಿವರು ಒಳಗೊಂಡಿದ್ದರು.

2023 ಡಿಸೆಂಬರ್ 18ರಂದು ರಾತ್ರಿ ಎಡನೀರು ಪಾಡಿ ಕೋರಿಕ್ಕಾರಿನ ಮುಹಶಿರ್ ಎಂಬವರ ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಅವರ ಸಹೋದರ ಮುಬಶಿರ್‌ರ ಬೈಕ್ ಕಳವುಗೈಯ್ಯಲ್ಪಟ್ಟಿತ್ತು. ಈ ಬಗ್ಗೆ ಮುಬಶೀರ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಈ ಮಧ್ಯೆ ವಿದ್ಯಾನಗರ ಪೊಲೀಸರು ನಿನ್ನೆ ಮಾಯಿಪ್ಪಾಡಿಯಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಬಂದ ಬೈಕ್‌ನ್ನು ತಪಾಸಣೆಗೊಳಪಡಿಸಿದಾಗ ಅದು ಕದ್ದ ಬೈಕ್ ಆಗಿರುವುದಾಗಿ ಸ್ಪಷ್ಟಗೊಂಡಿದೆ. ಅದಕ್ಕೆ ಸಂಬಂಧಿಸಿ ಆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮಂಗಳೂರು ನಿವಾಸಿ ಗಳಾದ ಈ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

  ಕಳವುಗೈದ ವಾಹನಗಳ ನಂಬರ್ ಪ್ಲೇಟ್  ಇತ್ಯಾದಿಗಳನ್ನು ಬದಲಾಯಿಸಿ ಇತರರಿಗೆ ಮಾರಾಟಮಾಡುವ ವ್ಯಕ್ತಿಗಳಾಗಿದ್ದಾರೆ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಮಂಗಳೂರಿನ ಶಕೀಲ್ ಎಂಬಾತ  ಈ ಬೈಕ್‌ನ್ನು ಕದ್ದಿದ್ದಾನೆಂದೂ ಬಳಿಕ ಅದನ್ನು ಮಾರಾಟಕ್ಕಾಗಿ ತಮಗೆ ನೀಡಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆಂದು  ಪೊಲೀಸರು ತಿಳಿಸಿದ್ದಾರೆ. ಇದರಂತೆ ಬೈಕ್ ಕಳವುಗೈದ ಆರೋಪಿ ಶಕೀಲ್‌ನ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page