ಅಂತಾರಾಷ್ಟ್ರೀಯ ಯೋಗ ದಿನ:ಯೋಗ ಕೇವಲ ಜ್ಞಾನವಷ್ಟೇ ಅಲ್ಲ ವಿಜ್ಞಾನವೂ ಆಗಿದೆ-ಪ್ರಧಾನಿ

ಹೊಸದಿಲ್ಲಿ: ಭಾರತ ಸೇರಿದಂತೆ ವಿಶ್ವದಾದ್ಯಂತ ಇಂದು 10ನೇ ಆಂತಾ ರಾಷ್ಟ್ರೀಯ ಯೋಗದಿನ ಆಚರಿಸಲಾ ಗುತ್ತಿದೆ. ಇದರಂತೆ ಕಾಶ್ಮೀರದ ಶ್ರೀನಗರ ದಾಲ್ ಸರೋವರದ ದಡದಲ್ಲಿರುವ ಎಸ್‌ಕೆಐಸಿಸಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ 7000ಕ್ಕೂ ಹೆಚ್ಚು ಮಂದಿಯೊಂದಿಗೆ ಯೋಗ ಮಾಡಿದರು. ಆ ವೇಳೆ ಆ ಪ್ರದೇಶದಾ ದ್ಯಂತ ಬಿಗು ಭದ್ರತೆ ಏರ್ಪಡಿಸಲಾಗಿತ್ತು.

ಯೋಗ ಮಾಡುವ ಮೊದಲು ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾ ಡುತ್ತಾ, ಯೋಗ ನಮಗೆ ಶಕ್ತಿ ನೀಡುತ್ತದೆ. ಇದು ಬರೀ ಜ್ಞಾನ ಮಾತ್ರವಲ್ಲ  ವಿಜ್ಞಾನವೂ ಆಗಿದೆ.  ಮಾಹಿತಿ ಸಂಪನ್ಮೂಲಗಳ ಪ್ರವಾಹವೇ ಇದೆ. ಅಂತಹ ಪರಿಸ್ಥಿತಿ ಒಂದು ವಿಷಯದ ಮೇಲೆ ಕೇಂದ್ರೀಕರಿಸುವುದು ಕಷ್ಟವಾಗುತ್ತಿದೆ. ಇದಕ್ಕೆ ಪರಿಹಾರ ಯೋಗದಲ್ಲಿದೆ. ಯೋಗದ ಪ್ರಯಾಣ ಮುಂದುವರಿಯುತ್ತಿದೆ. ಇಂದು ಜಗತ್ತಿನಲ್ಲಿ  ಯೋಗ ಮಾಡುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಯೋಗಾಸನದಿಂದ ಮಾನಸಿಕ,  ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಯೋಗಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಲಭಿಸಿದೆ. ಯೋಗಾಭ್ಯಾಸದಿಂದ ಅನೇಕ ರೋಗ ಗಳಿಗೂ ಮುಕ್ತಿ ಸಿಗಲಿದೆಯೆಂಬುದು ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟಿದೆ ಯೆಂದೂ ಅವರು ಹೇಳಿದರು.

2014 ಸೆಪ್ಟಂಬರ್ 27ರಂದು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗದಿನವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು.  ಭಾರತದ ಈ ಪ್ರಸ್ತಾಪವನ್ನು ವಿಶ್ವಸಂಸ್ಥೆಯಲ್ಲಿ 177 ದೇಶಗಳು ಸರ್ವಾನುಮತದಿಂದ ಬೆಂಬಲಿಸಿದ್ದವು. ಅದರಂತೆ 2014 ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆ ಅದಕ್ಕೆ ಅಂಗೀಕಾರ ನೀಡಿದೆ. ಅಂದಿನಿಂದ ಇದು ನಿರಂತರವಾಗಿ ದಾಖಲೆ ಸೃಷ್ಟಿಸುತ್ತಾ ಸಾಗುತ್ತಿದೆ. ವಿಶ್ವಾದ್ಯಂತವಾಗಿ ಎಲ್ಲೆಡೆಗಳಲ್ಲಿ ಇಂದು ಯೋಗ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page