ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ದಿನಾಂಕ ಮುಂದೂಡಿಕೆ
ಕಾಸರಗೋಡು: ವಿಶೇಷ ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಜನವರಿ 22ರಂದು ಪ್ರಕಟಿಸಲಾಗು ವುದು. ಭಾರತೀಯ ಚುನಾವಣಾ ಆಯೋಗವು ಪ್ರಕಟಣೆ ದಿನಾಂಕವನ್ನು ಜನವರಿ 5 ರಿಂದ ಜನವರಿ 22 ಕ್ಕೆ ಬದಲಾಯಿಸಿದೆ. ಕರಡು ಮತದಾರರ ಪಟ್ಟಿಯಲ್ಲಿ ಮರಣ ಹೊಂದಿದವರು ಅಥವಾ ಶಾಶ್ವತವಾಗಿ ಸ್ಥಳಾಂತರಗೊAಡವರು ಇದ್ದಲ್ಲಿ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಯÁಗಿರುವ ಜಿಲ್ಲಾಧಿಕಾರಿ ಕೆ.ಇಂಬಶೇಖರ್ ತಿಳಿಸಿದ್ದಾರೆ. ಹೊಸತಾಗಿ ಹೆಸರು ಸೇರಿಸುವವರು ಫೋರಂ 6 ಸಲ್ಲಿಸುವಾಗ ಅರ್ಜಿಯೊಂದಿಗೆ ಮತದಾರರ ಪಟ್ಟಿಯಲ್ಲಿ ಹೆಸರಿರುವ ಕುಟುಂಬದ ಸದಸ್ಯರ ಇಲೆಕ್ಷನ್ ಐಡೆಂಟಿಟಿ ಕಾರ್ಡ್ ನಂಬರ್ ಸಹ ನೀಡಬೇಕು.
2024 ಜನವರಿ 1ಕ್ಕೆ 18 ವರ್ಷ ಪೂರ್ಣಗೊಂಡ ಎಲ್ಲಾ ಮತದಾರರನ್ನು ಸೇರ್ಪಡೆಗೊಳಿಸಲು ಹಾಗೂ ಮೃತ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಕೋರಿದರು.
ಮೊಬೈಲ್ ಫೋನ್ನಲ್ಲಿ ವೋಟರ್ ಹೆಲ್ಪ್ ಆಪ್ ಡೌನ್ಲೋಡ್ ಮಾಡುವ ಮೂಲಕ ಮತದಾರರ ಪಟ್ಟಿಯನ್ನು ಪರಿಶೀಲಿಸಲು ಹಾಗೂ ನಿಮ್ಮ ಹೆಸರನ್ನು ಸುಲಭವಾಗಿ ಸೇರಿಸಬಹುದಾಗಿದೆ. ವೋಟರ್ ಸರ್ವೀಸ್ ಪೋರ್ಟಲ್ ಮೂಲಕ ಆನ್‌ಲೆÊನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಬಿ.ಎಲ್.ಒ ಮೂಲಕವೂ ಸೇರಿಸಬಹುದು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಅರ್ಹರನ್ನು ಸೇರಿಸಿಕೊಂಡು ಅನರ್ಹರನ್ನು ತೆಗೆದು ಹಾಕಿ ತಪ್ಪುಗಳಿಲ್ಲದೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.