ಅಂಬಲತರದಲ್ಲಿ ಪತ್ತೆಯಾದುದೆಲ್ಲವೂ ಖೋಟಾನೋಟುಗಳು

ಕಾಸರಗೋಡು: ಅಂಬಲತರ ಪಾರ ಪಳ್ಳಿ ಗುರುಪುರದ ಬಾಡಿಗೆ ಮನೆಯಲ್ಲಿ ಪತ್ತೆಯಾದ ೨೦೦೦ ರೂ. ಮುಖ ಬೆಲೆಯ ಖೋಟಾನೋಟುಗಳೆಲ್ಲವೂ ಖೋಟಾನೋಟುಗಳಾಗಿವೆ ಎಂಬುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಹೀಗೆ ಒಟ್ಟು ೬.೯೬ ಕೋಟಿ ರೂ.ಗಳ ಖೋಟಾ  ನೋಟುಗಳು ಪತ್ತೆಯಾಗಿದ್ದು, ಅದಕ್ಕೆ ಸಂಬಂಧಿಸಿ ಖೋಟಾನೋಟು ವ್ಯವಹಾರ ಸೆಕ್ಷನ್ ಪ್ರಕಾರ ಅಂಬಲತರ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಈ ಮನೆಯಿಂದ ೭.೨೫ ಕೋಟಿ ರೂ. ಪತ್ತೆಯಾಗಿದೆ ಎಂದು ಆರಂಭಿಕ ಹಂತದಲ್ಲಿ ಪೊಲೀಸರು ತಿಳಿಸಿದ್ದರೂ, ಅವುಗಳ ಎಣಿಕೆ ಬಳಿಕ ಅವುಗಳೆಲ್ಲವೂ ಖೋಟಾನೋಟು ಗಳಾಗಿರುವುದು ಸ್ಪಷ್ಟಗೊಂಡಿದೆ  ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತದಲ್ಲಿ ೨೦೦೦ ರೂ. ಮುಖ ಬೆಲೆಯ ನೋಟುಗಳನ್ನು ಅಸಿಂಧು ಗೊಳಿಸಿದ್ದರೂ, ಭಾರತೀಯ ರಿಸರ್ವ್ ಬ್ಯಾಂಕ್ ಅದನ್ನು ಈಗಲೂ ಸ್ವೀಕರಿಸು ತ್ತಿದೆ. ಆ ಹಿನ್ನೆಲೆಯಲ್ಲಿ ಖೋಟಾ ನೋ ಟುಗಳನ್ನು ಮುದ್ರಿಸಿ ಅದು ಅಸಲಿ ನೋ ಟುಗಳಾಗಿವೆ ಎಂದು ನಂಬಿಸಿ ಅದನ್ನು ವಿತರಿಸುವ ವ್ಯವಹಾರದಲ್ಲಿ ಖೋಟಾ ನೋಟು ವ್ಯವಹಾರದವರು ತೊಡಗಿ ದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಪತ್ತೆಯಾದ ಖೋಟಾನೋಟು ಗಳನ್ನು ಕರ್ನಾಟಕದಲ್ಲಿ ಮುದ್ರಿಸಿ ಅಲ್ಲಿಂದ ಇಲ್ಲಿಗೆ ತಲುಪಿಸಲಾಗಿದೆ ಎಂಬ ಬಲವಾದ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಈ ತನಕ ಯಾರನ್ನೂ ಆರೋಪಿಯನ್ನಾಗಿ ಸೇರಿಸಲಾಗಿಲ್ಲ ಮತ್ತು ಬಂಧಿಸಲಾಗಿಲ್ಲ. ತನಿಖೆ ಪೂರ್ಣಗೊಂಡು ಸ್ಪಷ್ಟ ಪುರಾವೆಗಳು ಲಭಿಸಿದ ಬಳಿಕವಷ್ಟೇ ಬಂಧನ ಇತ್ಯಾದಿ ಕ್ರಮಗಳು ಮುಂದೆ ನಡೆಯಲಿದೆ. ಈ ಖೋಟಾ ವ್ಯವ ಹಾರದಲ್ಲಿ ಭಾಗಿಯಾಗಿರುವವರೆಂದು ಹೇಳಲಾಗುತ್ತಿರುವ ಇಬ್ಬರು ವ್ಯಕ್ತಿಗಳು ಇನ್ನೂ ಅಪ್ರತ್ಯಕ್ಷವಾಗಿದ್ದು, ಅವರ ಮೊಬೈಲ್ ಫೋನ್‌ಗಳು ಈಗ ಸ್ವಿಚ್‌ಆಫ್ ಗೊಂಡ ಸ್ಥಿತಿಯಲ್ಲಿದೆ. ಅವರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆ ಯನ್ನು ಪೊಲೀಸರು ಇನ್ನಷ್ಟು ತೀವ್ರ ಗೊಳಿಸಿದ್ದಾರೆ. ಇವರನ್ನು ಸಮಗ್ರ ವಿಚಾರ ಣೆಗೊಳಪಡಿಸಿದ ಬಳಿಕವಷ್ಟೇ ಈ ಖೋಟಾನೋಟು ವ್ಯವಹಾರ ಕುರಿತಾದ ಸಂಪೂರ್ಣ ಮಾಹಿತಿಗಳು ಲಭಿಸಲಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಪುತ್ತೂರು ನಿವಾಸಿ ಮೂಲಕ ಈ ಖೋಟಾನೋಟುಗಳನ್ನು ಇಲ್ಲಿಗೆ ತರಲಾಗಿದೆ. ಅದನ್ನು ಅಂಬಲತರ ಪಾರಪಳ್ಳಿ ಗುರುಪುರದ ಬಾಡಿಗೆ ಮನೆಯಲ್ಲಿ ಬಚ್ಚಿಡಲಾಗಿತ್ತು. ಪಾರಪಳ್ಳಿ ಯ ಬಾಬುರಾಜ್ ಎಂಬವರ ಮಾಲ ಕತ್ವದಲ್ಲಿರುವ ಈ ಮನೆಯನ್ನು ಅಬ್ದುಲ್ ರಜಾಕ್ ಎಂಬಾತ ಬಾಡಿಗೆಗೆ ಪಡೆದು ಕೊಂಡಿದ್ದನು. ಆ ಮನೆಯಲ್ಲಿ ಖೋಟಾ ನೋಟು ಬಚ್ಚಿಡಲಾಗಿತ್ತು. ಈ ಮನೆಯಲ್ಲಿ ಹಣ ಬಚ್ಚಿಡಲಾಗಿದೆ ಎಂಬ ಬಗ್ಗೆ ಗುಪ್ತಮಾಹಿತಿ ಲಭಿಸಿದನ್ವಯ ಮಾರ್ಚ್ ೨೦ರಂದು ರಾತ್ರಿ ಆ ಮನೆಗೆ ಪೊಲೀಸರು ದಾಳಿ ನಡೆಸಿದ್ದರು.

ಮೊನ್ನೆ ಆರಂಭಿಸಿದ ನೋಟುಗಳ ಎಣಿಕೆ ನಿನ್ನೆ ತನಕ ಪೊಲೀಸರು ಮುಂದುವರಿಸಿದ್ದರು. ೨೦೦ರಷ್ಟು ಪೊಲೀಸರು ಸೇರಿ ಈ ನೋಟುಗಳನ್ನು ಎಣಿಕೆ ಮಾಡಿದ್ದರು. ಈ ಖೋಟಾನೋಟುಗಳನ್ನು ಇಂದು ಹೊಸದುರ್ಗ ಮೆಜಿಸ್ಟ್ರೇಟ್ ನ್ಯಾಯಾಲ ಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಬೇಕಲ ಡಿವೈಎಸ್‌ಪಿ ಜಯನ್ ಡೊಮಿನಿಕ್‌ರ ಮೇಲ್ನೋಟದಲ್ಲಿ ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page