ಅಕ್ರಮವಾಗಿ ಸಾಗಿಸುತ್ತಿದ್ದ ಮರಳು  ಸಹಿತ ಎರಡು ವಾಹನ ವಶ

ಕಾಸರಗೋಡು: ಕಾಸರಗೋಡು ಮತ್ತು ಮೇಲ್ಪರಂಬ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗ ಳಲ್ಲಾಗಿ ಅನಧಿಕೃತವಾಗಿ ಸಾಗಿಸುತ್ತಿದ್ದ ಎರಡು ಲೋಡ್ ಮರಳು ವಶಪಡಿಸಿಕೊಂಡಿದ್ದಾರೆ.

ಮೊಗ್ರಾಲ್ ಪುತ್ತೂರಿನಲ್ಲಿ ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾಚಣೆಯಲ್ಲಿ ಟೆಂಪೋದಲ್ಲಿ ಸಾಗಿಸುತ್ತಿದ್ದ ಹೊಯ್ಗೆ ವಶಪಡಿಸಿದ್ದಾರೆ. ಆಗ ಆ ವಾಹನವನ್ನು ಚಾಲಕ   ಅಲ್ಲೇ ಉಪೇಕ್ಷಿಸಿ ಪರಾರಿಯಾಗಿದ್ದಾನೆ. ಬಳಿಕ ಆ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಇದೇ ರೀತಿ ಪೊಯಿನಾಚಿ ಸಮೀಪದ ಇಡವುಂಗಾಲ್-ಚಾತಂಗೈ ರಸ್ತೆಯಲ್ಲಿ ರಾತ್ರಿ ವೇಳ ಮೇಲ್ಪರಂಬ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಟಿಪ್ಪರ್ ಲಾರಿಯಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಹೊಳೆ ಮರಳನ್ನು ವಶಪಡಿಸಿದ್ದಾರೆ. ಆ ವೇಳೆ ಅದರ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಹೊಯ್ಗೆಯನ್ನು ಲಾರಿ ಸಹಿತ ವಶಪಡಿಸಿಕೊಂಡು ಠಾಣೆಗೆ ಸಾಗಿಸಿದ್ದಾರೆ. ಟಿಪ್ಪರ್ ಲಾರಿಯ ನೋಂದಾವಣೆ ನಂಬ್ರವನ್ನು ಸರಿಯಾಗಿ  ಗೋಚರಿಸದ ರೀತಿಯಲ್ಲ್ಲಿ ಅಳವಡಿಸಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ

RELATED NEWS

You cannot copy contents of this page