ಕಾಸರಗೋಡು: ಆಲಂಪಾಡಿ ಮಿನಿ ಎಸ್ಟೇಟ್ ಬಳಿ ನಿನ್ನೆ ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ಬಾಬು ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಹೊಳೆ ಹೊಯ್ಗೆ ಹೇರಿ ಸಾಗಿಸಲಾ ಗುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಎರ್ದುಂಕಡವಿನ ಅಬ್ದು ಲ್ ಉನೈಸ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.