ಅಗಲಿದ ಎಸ್‌ಸಿ ಮೋರ್ಛಾ ಮುಖಂಡನಿಗೆ ನುಡಿನಮನ

ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಎಸ್‌ಸಿ ಮೋರ್ಛಾ ಅಧ್ಯಕ್ಷರಾಗಿದ್ದ ವರ್ಕಾಡಿ ನಿವಾಸಿ ಕೃಷ್ಣಪ್ಪ ಮಡಿಕರ ನಿಧನಕ್ಕೆ ನುಡಿನಮನ ಕಾರ್ಯಕ್ರಮ ವರ್ಕಾಡಿ ಕಾವಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪರಿಸರದಲ್ಲಿ ಜರಗಿತು.

ಬಿಜೆಪಿ ಜಿಲ್ಲಾ ಕಾರ್ಯ ದರ್ಶಿ ವಿಜಯ ಕುಮಾರ್ ರೈ, ಜಿಲ್ಲಾ ಉಪಾಧ್ಯಕ್ಷ ಸುಧಾಮಾ ಗೋಸಾಡ, ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಮುಖಂಡರಾದ ಎ.ಕೆ. ಕಯ್ಯಾರ್, ಮಣಿಕಂಠ ರೈ, ತುಳಸಿ ಕುಮಾರಿ, ಜಗದೀಶ್, ಭಾಸ್ಕರ್ ಪೊಯ್ಯೆ, ರವಿರಾಜ್, ಸುಭಾಷ್ ಅಡಪ್ಪ, ರಾಧಾಕೃಷ್ಣ ಹೊಳ್ಳ, ನಾಗರಾಜ ಭಟ್, ದೇವಪ್ಪ ಹಾಗೂ  ಕಾರ್ಯಕರ್ತರು ಉಪಸ್ಥಿತರಿದ್ದರು.

You cannot copy contents of this page