ಅಗಲಿದ ಸಮರ ನಾಯಕವಿ.ಎಸ್. ಅಚ್ಯುತಾನಂದನ್‌ರಿಗೆ ಅಶ್ರುತರ್ಪಣೆ

ತಿರುವನಂತಪುರ: ಅಗಲಿದ ಕೇರಳದ ಮಾಜಿ ಮುಖ್ಯಮಂತ್ರಿ, ಕಮ್ಯೂನಿಸ್ಟ್ ಪಕ್ಷದ ಭೀಷ್ಮಾಚಾ ರ್ಯರೆಂದೇ ಕರೆಯಲಾಗುತ್ತಿರುವ ಹಿರಿಯ ನೇತಾರ ವಿ.ಎಸ್. ಅಚ್ಯುತಾನಂದನ್ (102)ರ ನಿಧನಕ್ಕೆ ರಾಜ್ಯ ಕಂಬನಿ ಮಿಡಿಯುತ್ತಿದೆ.

ಅಚ್ಯುತಾನಂದನ್‌ರ ನಿಧನದ ಹಿನ್ನೆಲೆಯಲ್ಲಿ  ರಾಜ್ಯ ಸರಕಾರ ಇಂದು  ಸಾರ್ವತ್ರಿಕ ರಜೆ ಘೋಷಿಸಿದೆ. ಮಾತ್ರ ವಲ್ಲ ಮೂರು ದಿನಗಳ ಶೋಕಾಚರಣೆ ಆಚರಿಸಲಾಗುತ್ತಿದೆ. ವಿ.ಎಸ್. ಅಚ್ಯುತಾನಂದನ್ ನಿನ್ನೆ ಅಪರಾಹ್ನ 3.30ಕ್ಕೆ ತಿರುವನಂತಪುರದ ಎಸ್‌ಯುಟಿ ಆಸ್ಪತ್ರೆಯಲ್ಲಿ ಹೃದಯಾ ಘಾತಕ್ಕೊಳಗಾಗಿ ಕೊನೆಯುಸಿರೆಳೆದರು.  ಉಸಿರಾಟ ತೊಂದರೆಯಿಂದಾಗಿ ಅವರನ್ನು ವಾರಗಳ ಹಿಂದೆಯೇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

2006 ಮೇ 18ರಂದು ಕೇರಳದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅಚ್ಯುತಾನಂದನ್ 2011 ಮೇ 14ರ ತನಕ ಆ ಹುದ್ದೆಯಲ್ಲಿ ಮುಂದುವರಿದರು. ಅದಕ್ಕಿಂತ ಮೊದಲು ಅವರು ಮೂರು ಬಾರಿ ರಾಜ್ಯದ ವಿರೋಧಪಕ್ಷ ನಾಯಕನಾಗಿಯೂ ಸೇವೆ ಸಲ್ಲಿಸಿದ್ದರು. ಕೇರಳದ ಇತಿಹಾಸದಲ್ಲಿ ಅಸಾಧಾರಣ ಶಕ್ತಿಯಾಗಿದ್ದ ಅಚ್ಯುತಾನಂದನ್ 2018ರ ವರೆಗೆ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ನಂತರ  ಅನಾರೋಗ್ಯದ ನಿಮಿತ್ತ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿದರು. 2001ರಿಂದ 20 ವರ್ಷಗಳ ಕಾಲ ಅವರು ಆಲಪ್ಪುಳ ಜಿಲ್ಲೆಯ ಮಾರಾರಿಕುಳಂ ವಿಧಾನಸಭಾ  ಕ್ಷೇತ್ರದ ಶಾಸಕನಾಗಿ ನಿರಂತರವಾಗಿ ಆಯ್ಕೆಗೊಂಡಿದ್ದಾರೆ.

1923 ಅಕ್ಟೋಬರ್ 20ರಂದು ಆಲಪ್ಪುಳ ಜಿಲ್ಲೆಯ ಪುನ್ನಪ್ರ ವೇಲಿಕಗತ್ತ್ ಶಂಕರನ್-ಅಕ್ಕಮ್ಮ ದಂಪತಿಯ ಪುತ್ರನಾಗಿ ಅಚ್ಯುತಾನಂದನ್ ಜನಿಸಿದ್ದರ. ಅವರಿಗೆ ನಾಲ್ಕು ವರ್ಷಪ್ರಾ ಯವಿದ್ದಾಗ ತಾಯಿ, 11ನೇ ವಯಸ್ಸಿ ನಲ್ಲಿ ತಂದೆಯನ್ನು ಕಳದುಕೊಂಡರು. ಅನಂತರ ತಂದೆಯ ಸಹೋದರಿ ಅಚ್ಯುತಾನಂದನ್‌ರನ್ನು ಸಲಹಿದರು. ತಂದೆಯ ನಿಧನದೊಂದಿಗೆ 7ನೇ ತರಗತಿ ಯಲ್ಲೇ ಶಿಕ್ಷಣ ಮೊಟಕುಗೊಳಿಸ ಬೇಕಾಗಿ ಬಂತು. ಇವರು  ಪತ್ನಿ ಆರೋಗ್ಯ ಇಲಾಖೆಯ ನಿವೃತ್ತ ನರ್ಸ್ ಕೆ. ವಸುಮತಿ, ಮಕ್ಕಳಾದ ಡಾ| ವಿ.ವಿ, ಆಶಾ, ವಿ.ವಿ. ಅರುಣ್ ಕುಮಾರ್ (ಅಡಿಶನಲ್ ಡೈರೆಕ್ಟರ್, ಐಎಚ್‌ಆರ್‌ಡಿ), ಅಳಿಯ ಡಾ| ಟಿ. ತಂಗರಾಜ್, ಸೊಸೆ ಡಾ| ರಜನಿ ಬಾಲಚಂದ್ರನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 

ಯಾವುದೇ ರೀತಿ ಭ್ರಷ್ಟಾಚಾರದ ಆರೋಪಕ್ಕೊಳಗಾಗದ ಕೇರಳದ ಏಕೈಕ ಹಿರಿಯ ರಾಜಕಾರಣಿಯಾ ಗಿದ್ದಾರೆ ವಿ.ಎಸ್  ಅಚ್ಯುತಾನಂದನ್.  ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ಧ ಸದಾ ಹೋರಾಡಿದ ಓರ್ವ ಧೀಮಂತ ನೇತಾರರಾಗಿದ್ದಾರೆ.

ಅಚ್ಯುತಾನಂದನ್‌ರ ಪಾರ್ಥಿವ ಶರೀರವನ್ನು ತಿರುವನಂತಪುರದ ಅವರ ವಸತಿಯಿಂದ ಇಂದು ಬೆಳಿಗ್ಗೆ ಸೆಕ್ರೆಟರಿಯೇಟ್‌ನ ದರ್ಬಾರ್ ಹಾಲ್‌ಗೆ ತಂದು ಅಂತಿಮ ದರ್ಶನಕ್ಕಾಗಿ ಇರಿಸಲಾಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಚಿವರು,ಸಿಪಿಎಂ ಮತ್ತು ವಿವಿಧ ರಾಜಕೀಯ ಪಕ್ಷಗಳ ನೇತಾರರು, ಕಾರ್ಯಕರ್ತರು, ವಿವಿಧ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳ ಗಣ್ಯರು ಸೇರಿದಂತೆ  ಭಾರೀ ಜನಪ್ರವಾಹವೇ ಅಂತಿಮ ದರ್ಶನಕ್ಕಾಗಿ ದರ್ಬಾರ್ ಹಾಲ್‌ಗೆ ಹರಿದುಬರತೊಡಗಿದೆ. ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ರಾಷ್ಟ್ರೀಯ ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ ಆಲಪ್ಪುಳದ ಪುನ್ನಪ್ರದಲ್ಲಿರುವ ಹುಟ್ಟೂರಿಗೆ ಸಾಗಿಸಲಾಗುವುದು.

ನಾಳೆ ಬೆಳಿಗ್ಗೆ 2 ಗಂಟೆಗೆ ಸಿಪಿಎಂನ ಆಲಪ್ಪುಳ ಜಿಲ್ಲಾ ಸಮಿತಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕಿರಿಸಲಾಗುವುದು. ನಂತರ 10 ಗಂಟೆಗೆ ಆಲಪ್ಪುಳ ಕಡಪ್ಪುರದ ರಿಕ್ರಿಯೇಶನ್ ಗ್ರೌಂಡ್‌ನಲ್ಲಿ ಮೃತದೇಹವನ್ನು  ಅಂತಿಮ ದರ್ಶನಕ್ಕಿರಿಸಿದ ಬಳಿಕ ಅಪರಾಹ್ನ 3 ಗಂಟೆಗೆ ಪುನ್ನಪ್ಪ ಸಂಗ್ರಾಮಗಾರರ ಸಂಸ್ಮರಣಾ ಭೂಮಿಯಾದ ವಲಿಯ ಚುಡುಕಾಟ್ಟಿಲ್ ಸ್ಮಶಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು.

Leave a Reply

Your email address will not be published. Required fields are marked *

You cannot copy content of this page