ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಮುಖಮಂಟಪ ನಿಧಿ ಸಂಗ್ರಹಕ್ಕೆ ಚಾಲನೆ
ಅಗಲ್ಪಾಡಿ: ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಿಸುವ ಮುಖಮಂಟಪದ ನಿಧಿ ಸಂಗ್ರಹಕ್ಕೆ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಚಾಲನೆ ನೀಡಿದರು. ಮಧುಸೂದನ ಆಯರ್ ಮಂಗಳೂರು ಅಧ್ಯಕ್ಷತೆ ವಹಿಸಿದರು. ಬಾಬು ಮಾಸ್ತರ್ ಅಗಲ್ಪಾಡಿ, ನಾರಾಯಣ ಮಣಿಯಾಣಿ ಕಾಟುಕುಕ್ಕೆ, ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಪ್ರೊ. ಶ್ರೀನಾಥ್, ಸುಧಾಮ ಪದ್ಮಾರು, ಈಶ್ವರಿ ಬೇರ್ಕಡವು, ಡಾ. ವೈ.ವಿ. ಕೃಷ್ಣಮೂರ್ತಿ, ಡಾ. ವೇಣುಗೋಪಾಲ ಕಳೆಯತ್ತೋಡಿ ಉಪಸ್ಥಿತರಿದ್ದರು. ಲಾವಣ್ಯ, ಶರಣ್, ರಮ್ಯ ಪ್ರಾರ್ಥನೆ ಹಾಡಿದರು. ರಮೇಶ್‌ಕೃಷ್ಣ ಪದ್ಮಾರು ಸ್ವಾಗತಿಸಿ, ನಿರೂಪಿಸಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಪಾಂಚಜನ್ಯ ಬಾಲಗೋಕುಲ ಕುಣಿತಭಜನಾ ತಂಡದಿಂದ ನೃತ್ಯ ಭಜನೆ ಜರಗಿತು.