ಅಗ್ನಿವೀರ್’ಗೆ ಆಯ್ಕೆಯಾದ ಗಿರೀಶ್ ನಾಯ್ಕ್‌ರಿಗೆ ಅಭಿನಂದನೆ

ಬೆಳ್ಳೂರು: ಭಾರತೀಯ ಸೇನೆ ಅಗ್ನಿವೀರ್‌ಗೆ ಆಯ್ಕೆಯಾದ ನೆಟ್ಟಣಿಗೆ ಓಂಶಿವ ಯುವಕೇಂದ್ರದ ಸದಸ್ಯ ಗಿರೀಶ್ ನಾಯ್ಕ್‌ರನ್ನು ಇಂದು ಬೆಳಿಗ್ಗೆ ನೆಟ್ಟಣಿಗೆ ಕ್ಷೇತ್ರದಲ್ಲಿ ಅಭಿನಂದಿಸಲಾಯಿತು. ಓಂಶಿವ ಕೇಂದ್ರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬೆಳ್ಳೂರು ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ಮುಂಡಾಸು, ಪತ್ರಕರ್ತ ಅಖಿಲೇಶ್ ನಗುಮುಗಂ, ಅಂತಾರಾಜ್ಯ ವಾಲಿಬಾಲ್ ಪಟು ಗಣೇಶ್ ರೈ, ಹರ್ಷ ರೈ, ಮುರಳೀಧರ, ಸಂತೋಷ್, ಸಚೀಂದ್ರ ರೈ, ನಯನ , ಗಿರೀಶ್ ಭಾಗವಹಿಸಿದರು.

ಇದೇ ವೇಳೆ ಇವರನ್ನು ತರಬೇತುಗೊಳಿಸಿದ ಯುವ ಕೇಂದ್ರದ ಸದಸ್ಯ ಮಾಜಿ ಹವಾಲ್ದಾರ್ ಕರುಣಾಕರ ಎಸ್‌ರನ್ನು ಅಭಿನಂದಿಸಲಾಯಿತು.

You cannot copy contents of this page