ಅಡಿಕೆ ಕೃಷಿಕರ ಸಮಸ್ಯೆ ಪರಿಹರಿಸಲು ತಜ್ಞ ತಂಡದ ನೇಮಕ-ಕೃಷಿ ಸಚಿವ
ತಿರುವನಂತಪುರ: ಕಾಸರಗೋಡು ಜಿಲ್ಲೆಯ ವಿವಿಧೆಡೆ ಅಡಿಕೆ ಕೃಷಿಗೆ ಬಾಧಿಸುವ ರೋಗಗಳ ಕುರಿತು ಅಧ್ಯಯನ ನಡೆಸಿ ಅವುಗಳಿಗೆ ಪರಿಹಾರ ಕ್ರಮಗಳನ್ನು ಕಂಡುಕೊಳ್ಳಲು ಹಾಗೂ ನಾಶನಷ್ಟಗಳನ್ನು ಅಂದಾಜಿಸಲು ತಜ್ಞ ತಂಡವನ್ನು ರೂಪೀಕರಿಸಿ ಸಮಗ್ರ ಯೋಜನೆ ಜ್ಯಾರಿಗೊಳಿಸುವುದಾಗಿ ಕೃಷಿ ಸಚಿವ ಪಿ. ಪ್ರಸಾದ್ ತಿಳಿಸಿದ್ದಾರೆ. ಕೇಂದ್ರ ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ, ಕೃಷಿ ವಿಜ್ಞಾನ ಕೇಂದ್ರ ಎಂಬಿಡೆಗಳ ವಿಜ್ಞಾನಿಗಳು ಒಳಗೊಂಡ ತಂಡ ಪ್ರತಿರೋಧ ಚಟುವಟಿಕೆಗಳಿಗೆ ಮೇಲ್ನೋಟ ವಹಿಸುವುದಾಗಿಯೂ ಸಚಿವ ತಿಳಿಸಿದರು. ಕೃಷಿಕರ ಆತಂಕಗಳನ್ನು ತಿಳಿಸಿ ಅಡಿಕೆ ಕೃಷಿ ವಲಯದ ಜನಪ್ರತಿನಿಧಿಗಳ ಪ್ರತ್ಯೇಕ ಬೇಡಿಕೆ ಪ್ರಕಾರ ವಿಧಾನಸಭಾ ಕಾನ್ಫರೆನ್ಸ್ ಹಾಲ್‌ನಲ್ಲಿ ಕರೆದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಂಯುಕ್ತ ಸಭೆಯಲ್ಲಿ ಸಚಿವ ಈ ಬಗ್ಗೆ ತಿಳಿಸಿದ್ದಾರೆ.
ಅಡಿಕೆ ಕೃಷಿ ವಲಯದಲ್ಲಿ ನಾಶನಷ್ಟಗಳ ಲೆಕ್ಕಾಚಾರ ಸಂಗ್ರಹಿಸುವುದಾಗಿಯೂ, ಅದರ ಆಧಾರದಲ್ಲಿ ಆರ್ಥಿಕ ಸಹಾಯ ಲಭ್ಯಗೊಳಿಸುವ ಬಗ್ಗೆ ಪರಿಶೀಲಿಸಲಾ ಗುವುದೆಂದು ಸಚಿವ ಭರವಸೆ ನೀಡಿ ದ್ದಾರೆ. ಕೇರ ಯೋಜನೆ ಮುಖಾಂತ ರವೂ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು. ಹವಾಮಾನ ಆಧಾರಿತ ವಿಮೆ ಯೋಜನೆಗೆ ಸಂಬಂಧಿಸಿ ಕೃಷಿಕರ ಮಧ್ಯೆ ತಿಳುವಳಿಕೆ ಮೂಡಿಸುವುದಾಗಿಯೂ ಯೋಜನೆಯ ಸೌಲಭ್ಯ ಕೃಷಿಕರಿಗೆ ಲಭಿಸುವ ರೀತಿಯಲ್ಲಿ ಶಿಬಿರ ನಡೆಸ ಲಾಗುವುದೆಂದು ಸಚಿವ ತಿಳಿಸಿದರು. ಜನಪರ ಯೋಜನೆಗಳಲ್ಲಿ ಪ್ರತೀ ಪ್ರದೇಶಕ್ಕೆ ಅಗತ್ಯವುಳ್ಳ ಪ್ರತಿರೋಧ ಕ್ರಮಗಳಿಗನುಸರಿಸಿ ಯೋಜನೆಗಳನ್ನು ರೂಪೀಕರಿಸಬೇಕೆಂದೂ ರೋಗ ನಿಯಂತ್ರಣ ಮಾರ್ಗಗಳನ್ನು ಕೈಗೊಳ್ಳುವುದರೊಂದಿಗೆ ಅಡಿಕೆ ಮರದ ಸಂರಕ್ಷಣೆಗಾಗಿ ಜೈವಿಕ ಗೊಬ್ಬರಗಳಿಗೆ ಪ್ರಾಧಾನ್ಯತೆ ನೀಡಬೇಕಾಗಿ ಸಚಿವ ತಿಳಿಸಿದರು. ಅಡಿಕೆ ಕೃಷಿಕರ ಸಾಲ ಬಾಧ್ಯತೆ ಹಾಗೂ ಸಾಲ ಮರುಪಾವತಿ ಕಾಲಾವಧಿಗೆ ಸಂಬಂಧಿಸಿ ಮೊರಟೋ ರಿಯಂ ಘೋಷಿಸಲು ಹಣಕಾಸು ಇಲಾಖೆಯ ಅನುಮತಿ ಲಭಿಸಿದ ಬಳಿಕ ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ತಿಳಿಸಿದರು. ಅಡಿಕೆ ಮರಗಳಿಗೆ ಬಾಧಿಸುವ ರೋಗಗಳ ನಿಯಂತ್ರಣಕ್ಕೆ ನೂತನ ಕ್ರಮಗಳನ್ನು ಪರಿಶೀಲಿಸುವು ದಾಗಿಯೂ ಸಚಿವ ತಿಳಿಸಿದರು.
ವಿಧಾನಸಭಾ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಇ. ಚಂದ್ರಶೇಖರನ್, ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಂಞಂಬು, ಎಕೆಎಂ ಅಶ್ರಫ್, ಕೃಷಿ ಅಭಿವೃದ್ಧಿ ಕೃಷಿ ಕ್ಷೇಮ ಇಲಾಖೆ ನಿರ್ದೇಶಕ ಶ್ರೀರಾಮ್ ವೆಂಕಟ ರಾಮನ್, ಕಾಞಂಗಾಡ್ ಸಬ್ ಕಲೆಕ್ಟರ್ ಪ್ರತೀಕ್ ಜೈನ್, ಕೇಂದ್ರತೋಟಗಾರಿಕಾ ಸಂಶೋಧನಾ ಕೇಂದ್ರದ ಪ್ಲಾಂಟ್ ಪ್ರೊಟೆಕ್ಷನ್ ಅಧಿಕಾರಿ ಡಾ. ವಿನಾಯಕ ಹೆಗ್ಡೆ, ಕೇರಳ ಕೃಷಿ ವಿಶ್ವವಿದ್ಯಾನಿಲಯ ಡೈರೆಕ್ಟರ್ ಆಫ್ ಎಕ್ಸ್‌ಟೆನ್ಶನ್ ಡಾ. ಜೇಕಬ್ ಜೋನ್ ಮೊದಲಾದವರು ಉಪಸ್ಥಿತರಿದ್ದರು.