ಅಡ್ಕ ಎಲ್‌ಪಿ ಶಾಲೆ ನಿರ್ಮಾಣಕ್ಕೆ ಸ್ಥಳ ಸಂದರ್ಶಿಸಿ ವರದಿ ನೀಡಲು ಸರಕಾರ ಆದೇಶ
ಮಂಗಲ್ಪಾಡಿ: ಪಂಚಾಯತ್‌ನ ಅಡ್ಕ ಎಂಬ ಸ್ಥಳದಲ್ಲಿ ಹೊಸತಾಗಿ ಎಲ್‌ಪಿ ಶಾಲೆ ಸ್ಥಾಪಿಸುವುದಕ್ಕೆ ಹಲವು ವರ್ಷಗಳ ಹಿಂದೆಯೇ ಮಂಜೂರು ಮಾಡಿದ ಸ್ಥಳದ ಬಗ್ಗೆ ವರದಿ ನೀಡಲು ಸರಕಾರ ಆದೇಶ ಹೊರಡಿಸಿದೆ. ಶಾಲೆ ಮಂಜೂರು ಗೊಳಿಸಲು ಮುಖ್ಯಮಂತ್ರಿಯವರ ನವಕೇರಳ ಸದಸ್ಸ್ ಮಂಜೇಶ್ವರ ವಿಧಾನಸಭಾ ಮಂಡಲ ಎನ್‌ಸಿಪಿ(ಎಸ್) ಅಧ್ಯಕ್ಷ ಮಹಮ್ಮೂದ್ ಕೈಕಂಬ ಮನವಿ ನೀಡಿದ್ದರು. ಅದರ ಮುಂದುವರಿಕೆಯಾಗಿ ಮಂಜೇಶ್ವರ ಅಸಿಸ್ಟೆಂಟ್ ಎಜ್ಯುಕೇಶನಲ್ ಅಧಿಕಾರಿಗೆ ಸ್ಥಳದ ಬಗ್ಗೆ ವರದಿ ನೀಡಲು ಸರಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಅಧಿಕಾರಿಗಳು, ಮಹಮ್ಮೂದ್ ಕೈಕಂಬ, ಸ್ಥಳೀಯರು ಸ್ಥಳ ಸಂದರ್ಶಿಸಿದರು.
ಪ್ರಸ್ತುತ ಅಡ್ಕ, ವಳಯಂ, ಬೈದಳ ಮೊದಲಾದ ಪ್ರದೇಶಗಳ ವಿದ್ಯಾರ್ಥಿಗಳು ಮಂಗಲ್ಪಾಡಿಯ ಕುಕ್ಕಾರ್ ಶಾಲೆಯನ್ನು ಆಶ್ರಯಿಸುತ್ತಿದ್ದಾರೆ. ಅಡ್ಕದಲ್ಲಿ ಎಲ್‌ಪಿ ಶಾಲೆ ಮಂಜೂರುಗೊಂಡರೆ ಸ್ಥಳೀಯ ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕ ವಾಗಲಿದೆ ಎಂಬ ಹಿನ್ನೆಲೆಯಲ್ಲಿ ಶಾಲೆಗಾಗಿ ಹೋರಾಟ ನಡೆಸಲಾಗಿದೆ.