ಉಪ್ಪಳ: ಶ್ರೀ ನಾಗ, ರಕ್ತೇಶ್ವರೀ ಹಾಗೂ ಗುಳಿಗ ಮತ್ತು ಕೊರಗಜ್ಜ ದೈವಗಳ ಸಾನ್ನಿಧ್ಯ ವೀರನಗರ ಅಡ್ಕ ಇಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ನಾಗ, ರಕ್ತೇಶ್ವರೀ ಹಾಗೂ ಗುಳಿಗ ಮತ್ತು ಕೊರಗಜ್ಜ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಾಳೆಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 3ರಂದು ಬೆಳಿಗ್ಗೆ 10ರಿಂದ ನಾಗ ಸಂಸ್ಕಾರ ಮತ್ತು ದಹನ ಕ್ರಿಯೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 5ಕ್ಕೆ ಅಡ್ಕ ಶ್ರೀ ಭಗವತೀ ಕ್ಷೇತ್ರದಿಂದ ಹೊರೆಕಾಣಿಕೆ ಶೋಭಾಯಾತ್ರೆ, 7.30ರಿಂದ ಸಾಂಸ್ಕöÈತಿಕ ಕಾರ್ಯಕ್ರಮ, ರಾತ್ರಿ 8ರಿಂದ ಅನ್ನಸಂತರ್ಪಣೆ, 4ರಂದು ಬೆಳಿಗ್ಗೆ 8.30ರಿಂದ ನಾಗಬಲಿ ಹೋಮ, ಆಶ್ಲೇಷ ಬಲಿ, ಬ್ರಹ್ಮಚಾರಿ ಆರಾಧನೆ, 10ರಿಂದ ಭಜನೆ, ಮಧ್ಯಾಹ್ನ ಅನ್ನಸಂತರ್ಪಣೆ, ವಿವಿಧ ತಂಡಗಳಿAದ ಭಜನೆ, 6ಕ್ಕೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, 7ರಿಂದ ವಿವಿಧ ವೈಧಿಕ ಕಾರ್ಯಕ್ರಮಗಳು, ರಾತ್ರಿ ಅನ್ನಸಂತರ್ಪಣೆ, 9ರಿಂದ ತಿರುವಾದಿರ ಕಳಿ, 5ರಂದು ಬೆಳಿಗ್ಗೆ 5ರಿಂದ ಕಲಶ ಪೂಜೆ, ಗಣಪತಿ ಹೋಮ ಸಹಿತ ವೈಧಿಕ ಕಾರ್ಯಕ್ರಮ, 7.30ಕ್ಕೆ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ವಿವಿಧ ವೈಧಿಕ ಕಾರ್ಯಕ್ರಮ, ಬೆಳಿಗ್ಗೆ 10ಕ್ಕೆ ಧಾರ್ಮಿಕ ಸಭೆ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 2ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 6ರಿಂದ ಗುಳಿಗಜ್ಜನ ಕೋಲ, ರಾತ್ರಿ ಅನ್ನಸಂತರ್ಪಣೆ, 9ರಿಂದ ಮರುದಿನ ಸೂರ್ಯೋದಯದ ತನಕ ಕೊರಗಜ್ಜನ ಕೋಲ ನಡೆಯಲಿದೆ.
