ಅಡ್ಯನಡ್ಕ ಬ್ಯಾಂಕ್ ಕಳವು: ಬಂಧಿತ ಮೂವರ ಸಮಗ್ರ ತನಿಖೆ; ಇನ್ನಿಬ್ಬರಿಗಾಗಿ ಶೋಧ
ಪೆರ್ಲ: ಕರ್ಣಾಟಕ ಬ್ಯಾಂಕ್‌ನ ಅಡ್ಕ ನಡ್ಕ ಶಾಖೆಯಿಂದ ಹಣ ಹಾಗೂ ಚಿನ್ನಾ ಭರಣ ಕಳವು ನಡೆಸಿದ ಪ್ರಕರಣದಲ್ಲಿ ಸೆರೆಗೀ ಡಾದ ಮೂವರು ಆರೋಪಿಗಳನ್ನು ಪೊಲೀ ಸರು ಸಮಗ್ರ ತನಿಖೆಗೊಳಪಡಿಸುತ್ತಿದ್ದಾರೆ.
ಅಲ್ಲದೆ ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರಿ ಸಲಾಗಿದೆ. ಕಾಸರಗೋಡು ಚೌಕಿಯ ಕಲಂದರ್ (೪೧), ಪೈವಳಿಕೆ ಬಳಿಯ ಬಾಯಾರಿನ ದಯಾನಂದ (೩೭), ಸುಳ್ಯ ಕೊಯ್ಲದ ರಫೀಕ್ ಯಾನೆ ಗೂಡಿನಬಳಿ ರಫೀಕ್ (೩೫) ಎಂಬವರು ಇದೀಗ ಸೆರೆಗೀಡಾದ ಆರೋಪಿಗಳಾಗಿದ್ದಾರೆ.
ವಿಟ್ಲ ಪೊಲೀಸರ ನೇತೃತ್ವದ ಪ್ರತ್ಯೇಕ ತನಿಖಾ ತಂಡ ಈ ಮೂವರನ್ನು ಬಂಧಿಸಿದೆ. ಈ ಆರೋಪಿಗಳ ಪೈಕಿ ಸುಳ್ಯ ಕೊಯ್ಲದ ರಫೀಕ್ ಈ ಕಳವು ತಂಡದ ರೂವಾರಿಯೆಂದೂ ಪೊಲೀಸರು ತಿಳಿಸಿದ್ದಾರೆ. ಈತ ಹಲವು ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಕಲಂದರ್ ವಿರುದ್ಧ ಪುತ್ತೂರು,ಸಂಪ್ಯ, ಕಣ್ಣೂರು ಮೊದಲಾದ ಪೊಲೀಸ್ ಠಾಣೆಗಳಲ್ಲೂ ಕಳವು ಪ್ರಕರಣ ದಾಖಲಾಗಿದೆ ಯೆಂದೂ ತಿಳಿಸಲಾಗಿದೆ. ಬಾಯಾರಿನ ದಯಾನಂದ ಗ್ಯಾಸ್ ವೆಲ್ಡರ್ ಆಗಿದ್ದು, ಈತ ಕಳವು ತಂಡಕ್ಕೆ ಸಹಾಯವೊದಗಿಸಿದ್ದಾನೆನ್ನಲಾಗಿದೆ. ಇದೇ ವೇಳೆ ಈ ಕಳವು ಪ್ರಕರಣದಲ್ಲಿ ಶಾಫಿ ಹಾಗೂ ವಿಜೇಶ್ ಎಂಬಿಬ್ಬರು ಕೂಡಾ ಆರೋಪಿಗಳಾಗಿ ದ್ದಾರೆ. ಅವರೀಗ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಫೆಬ್ರವರಿ ೭ರಂದು ಕರ್ಣಾಟಕ ಬ್ಯಾಂಕ್‌ನ ಅಡ್ಯನಡ್ಕ ಶಾಖೆಯಲ್ಲಿ ಕಳವು ನಡೆದಿದೆ. ಬ್ಯಾಂಕ್‌ನ ಹಿಂಬಾಗಿಲ ಕಿಟಿಕಿಯ ಸರಳು ಮುರಿದು ಒಳನು ಗ್ಗಿದ ಕಳ್ಳರು ಲಾಕರ್‌ನಲ್ಲ್ಲಿದ್ದ ೭ ಕಿಲೋ ಚಿನ್ನ ಹಾಗೂ ೧೭ ಲಕ್ಷ ರೂಪಾಯಿ ಕಳವು ನಡೆಸಿದ್ದರು.