ಅಣ್ಣನನ್ನು ಕೊಲೆಗೈದ ಪ್ರಕರಣ : ಆರೋಪಿ ತಮ್ಮನಿಗೆ ನ್ಯಾಯಾಂಗ ಬಂಧನ
ಕಾಸರಗೋಡು:ಆಸ್ತಿ ವಿವಾದ ದಿಂದ ಅಣ್ಣ ಚೆಮ್ನಾಡು ಮಾವಿಲ ಕೋಡು ಪೆರುವಳಪ್ಪಿಲ್ ನಿವಾಸಿ ಕೂಲಿ ಕಾರ್ಮಿಕ ಎಂ. ಚಂದ್ರನ್ ನಾಯರ್ (52)ನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಪೊಲೀಸರು ಬಂಧಿಸಿದ ಆರೋಪಿ ತಮ್ಮ ಎಂ. ಗಂಗಾಧರನ್ (45) ನನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಚಂದ್ರನ್‌ರನ್ನು ಮೊನ್ನೆ ರಾತ್ರಿ ಅವರ ಮನೆಯಲ್ಲಿ ಎದೆಗೆ ಇರಿದು ಕೊಲೆಗೈಯ್ಯಲಾಗಿತ್ತು. ಎದೆಯಲ್ಲಿ ಎರಡು ಆಳದ ಇರಿತದ ಗಾಯಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮದ್ಯದಮಲಿನಲ್ಲಿ ಮನೆಗೆ ಬಂದ ಆರೋಪಿ ಆಸ್ತಿ ವಿವಾದ ಹಾಗೂ ರೇಶನ್ ಕಾರ್ಡ್‌ನಲ್ಲಿ ಆತನ ಹೆಸರು ಸೇರ್ಪಡೆಗೊಳಿಸದೇ ಇರುವುದನ್ನು ಪ್ರಶ್ನಿಸಿ ಅದರ ಹೆಸರಲ್ಲಿ ಅಣ್ಣನೊಂದಿಗೆ ಜಗಳವಾಡಿ ಅವರಿಗೆ ಇರಿದಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಘರ್ಷಣೆ ತಡೆಯಲು ಬಂದ ಪರಿಸರದ ವರಾಗಿರುವ ಪೆರುವಳಪ್ಪಿಲ್‌ನ ಮಣಿಕಂಠನ್ (48) ಮತ್ತು ಗೋಪಿನಾಥನ್ (48) ಎಂಬವರಿಗೂ ಆರೋಪಿ ಇರಿದು ಗಾಯಗೊಳಿಸಿದ್ದನೆಂದು ಆರೋಪಿಸ ಲಾಗಿದ್ದು, ಆ ಇಬ್ಬರು ಈಗ ಚಿಕಿತ್ಸೆಯಲ್ಲಿದ್ದಾರೆ.