ಅತ್ಯಲ್ಪ ಕಾಲದಲ್ಲೇ ಎ ಕ್ಲಾಸ್ ಸಹಕಾರಿ ಸಂಘವಾಗಿ ಬೆಳೆದ ಕುಂಬಳೆ ಮರ್ಚಂಟ್ಸ್ ವೆಲ್ಫೇರ್ ಸಂಘದ ಪತನಕ್ಕೆ ಕಾರಣ ಯಾರು? ಅನಧಿಕೃತವಾಗಿ ಖರ್ಚು ಮಾಡಿದ 10.85 ಲಕ್ಷ ರೂ. ಮರಳಿ ಪಾವತಿಸಲು ನಿರ್ದೇಶ

ಕುಂಬಳೆ: ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘದ ಕಚೇರಿ ಯನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿ ಸಲು ಸಂಘ ಅನಧಿಕೃತವಾಗಿ ಖರ್ಚು ಮಾಡಿದ 10,85,000 ರೂಪಾಯಿ ಗಳನ್ನು ಮರಳಿ ಪಾವತಿಸುವಂತೆ ಸಹಕಾರಿ ಜೋಯಿಂಟ್ ರಿಜಿಸ್ಟಾರ್ ನಿರ್ದೇಶ ನೀಡಿದ್ದಾರೆ. ಅನಧಿಕೃತವಾಗಿ ಹಣ ಖರ್ಚು ಮಾಡಿರುವುದಕ್ಕೆ ಸಂಘದ ಆಡಳಿತ ಸಮಿತಿ ಹಾಗೂ ಸೆಕ್ರಟರಿ ಹೊಣೆ ಗಾರರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅದ್ದರಿಂದ 10,85,000 ರೂಪಾಯಿಗಳನ್ನು ಮರಳಿ ಪಾವತಿಸ ಲಿರುವ ಹೊಣೆಗಾರರು ಆಡಳಿತ ಸಮಿತಿ ಹಾಗೂ ಸೆಕ್ರಟರಿ ಆಗಿದ್ದಾರೆಂದು ಆದೇಶದಲ್ಲಿ ತಿಳಿಸಲಾಗಿದೆ.
2023 ಅಕ್ಟೋಬರ್ 31ರಂದು ಮಚೆಂಟ್ಸ್ ವೆಲ್ಫೇರ್ ಸಂಘದ ಕಚೇರಿಯನ್ನು ಸ್ಥಳಾಂತರಿಸಲು ಆಡಳಿತ ಸಮಿತಿ ತೀರ್ಮಾನಿಸಿತ್ತು. 25-01-2024ರಂದು ಕೊಠಡಿಯೊಳಗೆ ಡಿಸೈನ್ ಕೆಲಸ ನಡೆಸಲು ಸಲಹೆಗಾರರನನ್ನು ನೇಮಿಸಲು ತೀರ್ಮಾನಿಸಲಾಯಿತು. ಸ್ಟ್ರೋಂಗ್ ರೂಮ್ಗೆ ಕೊಟೇಶನ್ ಕರೆ ಯಲು ಮಾರ್ಚ್ 5ರಂದು ಆಡಳಿತ ಸಮಿತಿ ತೀರ್ಮಾನಿಸಿತ್ತು. ಸ್ಟ್ರೋಂಗ್ ರೂಮ್ಗೆ ಬಾಗಿಲು ಅಳವಡಿಸಲು ಎಪ್ರಿಲ್ 9ರಂದು ಮಲಬಾರ್ ಜನರಲ್ ಏಜೆನ್ಸಿಗೆ 2.73 ಲಕ್ಷ ರೂ. ನೀಡಲಾಯಿತು. ಆದರೆ ಕಚೇರಿಯನ್ನು ಸ್ಥಳಾಂತರಿಸಲು ಹಾಗೂ ಅದನ್ನು ಪರಿಷ್ಕರಿಸುವ ಬಗ್ಗೆ ತೀರ್ಮಾನಿಸುವ ಮೊದಲು ಕಾನೂನು ರೀತಿಯಲ್ಲಿ ಸಂಘ ಜೊಯಿಂಟ್ ರಿಜಿಸ್ಟ್ರಾರ್ರ ಅನುಮತಿ ಅಗತ್ಯವಿದೆ. ಮೊದಲು ಮಾಡಬೇಕಾದ ಕಾನೂನು ರೀತಿಯ ಈ ಹೊಣೆಗಾರಿಕೆ ಯನ್ನು ಸಂಘ ನಿರ್ವಹಿಸಿಲ್ಲ. ಮಾತ್ರವಲ್ಲ ಸಂಘದ ಸುಮಾರು 11 ಲಕ್ಷ ರೂಪಾಯಿಯಷ್ಟು ಖರ್ಚು ಮಾಡಿದ ಬಳಿಕ ಮಾರ್ಚ್ 5ರಂದು ಸ್ಟ್ರೋಂಗ್ ರೂಮ್ಗೆ ಬಾಗಿಲು ಅಳವಡಿಸುವ ಜೋಯಿಂಟ್ ರಿಜಿಸ್ಟ್ರಾರ್ರ ಅನುಮತಿ ಗಾಗಿ ಅರ್ಜಿ ಸಲ್ಲಿಸಲು ಆಡಳಿತ ಸಮಿತಿ ತೀರ್ಮಾನಿಸಿತ್ತಾದರೂ ಅರ್ಜಿ ಸಲ್ಲಿಸಿಲ್ಲ. ಇನ್ಸ್ಪೈರ್ ಡಿಸೈನ್ ಎಂಬ ಸಂಸ್ಥೆ ಕೊಠಡಿಯ ಒಳಭಾಗ ಡೆಕರೇಶನ್ ಕೆಲಸವನ್ನು ವಹಿಸಿಕೊಂಡಿತ್ತು. ಅದಕ್ಕಾಗಿ ಅವರಿಗೆ ಸಂಘ 2024 ಜೂನ್ನಲ್ಲಿ 7 ಲಕ್ಷ ರೂಪಾಯಿ ನೀಡಿತ್ತು. ಹೊ ತಾಗಿ ಕಚೇರಿ ತೆರೆಯುವ ಕೊಠಡಿಗೆ ಪ್ರತೀ ತಿಂಗಳು 16000 ರೂಪಾಯಿ ಬಾಡಿಗೆ ನೀಡಲು 2023 ನವಂಬರ್ 30ರಂದು ಸಂಘದ ಆಡಳಿತ ಸಮಿತಿ ತೀರ್ಮಾನಿಸಿತ್ತು. ಮಾತ್ರವಲ್ಲ 2023 ಡಿಸೆಂಬನಿAðದ 2024 ಜೂನ್ವರೆಗೆ 7 ತಿಂಗಳ ಬಾಡಿಗೆಯಾಗಿ 1,12,000 ರೂಪಾಯಿ ಗಳನ್ನು ಸಂಘದ ಪದಾಧಿ ಕಾರಿಗಳು ನೀಡಿದ್ದಾರೆ. ಸಂಘದ ಹಣ ಸಂಘದ ಸದಸ್ಯರ, ಸಂಘದಿAದ ಹಣ ಸಾಲ ಪಡೆಯುವವರ ಹಾಗೂ ಹಣ ಠೇವಣಿಯಿರಿಸುವವರದ್ದಾಗಿದೆ. ಅದ್ದರಿಂದ ಅದು ಸಾರ್ವಜನಿಕರ ಹಣವಾಗಿ ಭಾವಿಸಲಾಗುತ್ತದೆ. ಈ ಹಣದಿಂದ 1 ಪೈಸೆ ಕೂಡ ನಷ್ಟವಾಗ ದಂತೆ ಕಾಪಾಡಿಕೊಳ್ಳಬೇಕಾದ ಹೊಣೆ ಗಾರಿಕೆ ಆಡಳಿತ ಸಮಿತಿಗಿದೆ. ಮಾತ್ರವಲ್ಲ ಬಾದ್ಯೆತೆಯಾಗುವ ಖರ್ಚುಗಳಿಗೆ ಮೊದಲು ಅದಕ್ಕೆ ಸಹಕಾರಿ ಇಲಾಖೆ ಯಿಂದ ಅನುಮತಿ ಪಡೆದ ಬಳಿಕವೇ ಖರ್ಚು ಮಾಡಬಹುದು ಎಂಬ ನಿರ್ದೇ ಶವಿದೆ. ಈ ಎಲ್ಲಾ ವ್ಯವಸ್ಥೆಗಳು ಅಸ್ತಿತ್ವದಲ್ಲಿ ರುವಾಗಲೇ ಸಹಕಾರಿ ಇಲಾಖೆಗೆ ಅರ್ಜಿ ಸಲ್ಲಿಸದೆ 10,85,000 ರೂಪಾಯಿ ಗಳನ್ನು ಕುಂಬಳೆ ಮಚೆಂಟ್ಸ್ ವೆಲ್ಫೇರ್ ಸಂಘ ಖರ್ಚು ಮಾಡಿದೆ.
ಸಂಘ ಆಡಳಿತದಲ್ಲಿ ಕಾನೂನು ವಿರುದ್ಧವಾಗಿ ವ್ಯಾಪಕ ನಡವಳಿಕೆಗಳು ಕಂಡುಬAದ ಹಿನ್ನೆಲೆಯಲ್ಲಿ ಸಹಕಾರಿ ಇಲಾಖೆ ಸಂಘದ ಅಧ್ಯಕ್ಷನನ್ನು ಆ ಸ್ಥಾನದಿಂದ ತೆರವುಗೊಳಿಸುವುದರೊಂದಿಗೆ ಆಡಳಿತ ಸಮಿತಿ ಇಲ್ಲದಾಗಿತ್ತು. ಇದ ರಿಂದ ಸಂಘದ ಆಡಳಿತ ಹೊಣೆಗಾರಿ ಕೆಯನ್ನು ಸಹಕಾರಿ ಇಲಾಖೆ ವಹಿಸಿಕೊಂಡಿತ್ತು. ಸಹಕಾರಿ ಇಲಾಖೆ ನೇಮಿಸಿದ ಅಡ್ಮಿಸ್ಟ್ರೇಟರ್ ಹೊಣೆಗಾರಿಕೆ ವಹಿಸಿಕೊಳ್ಳುವುದರೊಂದಿಗೆ ಹೊಸ ಕಚೇರಿ ಕೊಠಡಿಗೆ ಬಾಡಿಗೆ ರೂಪದಲ್ಲಿ ಪ್ರತೀ ತಿಂಗಳು 16 ಸಾವಿರ ರೂ. ನೀಡುವುದನ್ನು ನಿಲ್ಲಿಸಲಾಯಿತು. ಸಂಘದಲ್ಲಿ ನಡೆದ ವಂಚನೆಗಳು ಹಾಗೂ ಕಾನೂನು ವಿರುದ್ಧ ಚಟುವಟಿಕೆಗಳನ್ನು ಸಹಕಾರಿ ಇಲಾಖೆಯ ತನಿಖಾ ತಂಡ ಪತ್ತೆಹಚ್ಚಿರುತ್ತದೆ.
ಅದಕ್ಕಿರುವ ಸ್ಪಷ್ಟೀ ಕರಣವನ್ನು ಜೋಯಿಂಟ್ ರಿಜಿಸ್ಟ್ರಾರ್ ಆಡಳಿತ ಸಮಿತಿಯೊಂದಿಗೆ ನೇರವಾಗಿ ಅಥವಾ ಲಿಖಿತವಾಗಿ ನೀಡಲು ತಿಳಿಸ ಲಾಗಿದೆ. ಈ ತಿಂಗಳ 19ರಂದು ಸ್ಪಷ್ಟೀ ಕರಣ ನೀಡಬೇಕಾಗಿದೆ. ಸ್ಪಷ್ಟೀಕರಣ ನೀಡಿದರೂ ಅಥವಾ ಇಲ್ಲದಿದ್ದರೂ ಅನಂತರ ಕ್ರಮಗಳನ್ನು ಕೈಗೊಳ್ಳಲಾಗುವುದು. ಆಡಳಿತ ಸಮಿತಿಯಲ್ಲಿ ಸದಸ್ಯರಾಗಿದ್ದವರ ಆಡಳಿತದಲ್ಲಿ ಪತ್ತೆಹಚ್ಚಲಾದ ವಂಚನೆಗಳು ಸಾಬೀತುಗೊಂಡಲ್ಲಿ ಇನ್ನು ಮುಂದೆ ಅವರಿಗೆ ಸಂಘದ ಆಡಳಿತ ಸಮಿತಿಗೆ ಸ್ಪರ್ಧಿಸಲು ಅರ್ಹತೆಯಿರುವುದೇ ಎಂಬುವುದು ಪ್ರಶ್ನೆಯಾಗಿ ಉಳಿದುಕೊಂಡಿದೆ.

Leave a Reply

Your email address will not be published. Required fields are marked *

You cannot copy content of this page