ಎಡನೀರು: ಮೊಗೇರ ಸಾಂಸ್ಕೃತಿಕ ಸಮಿತಿಯ ನೇತೃತ್ವದಲ್ಲಿ ಎಡನೀರು ಮಠದಲ್ಲಿ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಯಿತು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕಾರ್ಯಕ್ರಮ ಉದ್ಘಾಟಿಸಿದರು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಯವರು ಆಶೀರ್ವಚನ ನೀಡಿ ಮಾತ ನಾಡಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಶೈಲಜಾ ಭಟ್, ಚೆಂಗಳ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಲೀಂ ಎಡನೀರು, ಎಡನೀರು ಮಠದ ಮೆನೇಜರ್ ಪಿ. ರಾಮಚಂದ್ರ ಕಲ್ಲೂ ರಾಯ, ಚಂದಪ್ಪ ಕೆ., ಕೆ.ಕೆ.ಸ್ವಾಮಿಕೃಪಾ, ಹರಿಷ್ಚಂದ್ರ ಪುತ್ತಿಗೆ, ವಸಂತ ಅಜಿಕ್ಕೋಡು, ಸುಧಾಕರ ಬೆಳ್ಳಿಗೆ ಮೊದಲಾದವರು ಮಾತನಾಡಿದರು. ಕೆ. ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದರು. ಸಮಾರೋಪ ಸಮಾರಂಭದಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ಆನಂದ ಕೆ. ಮವ್ವಾರು ಅಧ್ಯಕ್ಷತೆ ವಹಿಸಿದರು. ಶಾಸಕ ಎಕೆಎಂ ಅಶ್ರಫ್, ನ್ಯಾಯವಾದಿ ಕೆ. ಶ್ರೀಕಾಂತ್, ಡಿ. ಶಂಕರ ದರ್ಬೆತ್ತಡ್ಕ ರಾಮ ಮಂಜೇಶ್ವರ ಎ. ಲಕ್ಷ್ಮಣ ಚಂದ್ರಶೇಖರ ಕುಂಬೆ ಬಾಬು ನೆಲ್ಲಿಕmಟ್ಟೆ, ಡಿ. ಕೃಷ್ಣದಾಸ್ ಮೊದಲಾ ದವರು ಮಾತನಾಡಿದರು. ವಿವಿಧ ಸ್ತರಗಳಲ್ಲಿ ಪ್ರತಿಭಟನೆಗಳನ್ನು ಈ ಕಾರ್ಯ ಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.