ಅದ್ಯಾರೇ ಎದುರಿಸಿದರೂ ವಕ್ಫ್ ತಿದ್ದುಪಡಿ ಕಾಯ್ದೆ ಜ್ಯಾರಿಗೊಳಿಸಿಯೇ ಸಿದ್ಧ -ಅಮಿತ್‌ಶಾ

ರಾಂಚಿ: ಅದ್ಯಾರೇ ಎದುರಿಸಿ ದರೂ ವಕ್ಫ್ ತಿದ್ದುಪಡಿ ಕಾಯ್ದೆ ಯನ್ನು ಜ್ಯಾರಿಗೊಳಿಸಿಯೇ ಸಿದ್ಧವೆಂದು ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ರೈತರು, ಬಡವರ ಭೂಮಿ ಮತ್ತು ಆರಾಧನಾಲಯಗಳ ಭೂಮಿಯನ್ನು ವಕ್ಫ್ ಮಂಡಳಿಗಳು ಕಬಳಿಸುತ್ತಿದೆ. ಇದನ್ನು ತಡೆಗಟ್ಟಲು ವಕ್ಫ್ ತಿದ್ದುಪಡಿ ಕಾಯ್ದೆ ತರುವುದು ಖಚಿತ. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ವೆಂದೂ ಅವರು ಹೇಳಿದ್ದಾರೆ.

ಜಾರ್ಖಂಡ್‌ನ ಬಾಗ್ಮಾರಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಇದನ್ನು ಸ್ಪಷ್ಟ ಪಡಿಸಿದ್ದಾರೆ. ನೆರೆ ರಾಷ್ಟ್ರಗಳ ನುಸುಳುಕೋರರನ್ನು ತಡೆಗಟ್ಟಲು ಅಗತ್ಯವಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನಗೊಳಿ ಸಲಾಗುವುದು. ಅದನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ. ಆದರೆ ಈ ಕಾನೂನಿನ ವ್ಯಾಪ್ತಿಯಿಂದ ಬುಡಕಟ್ಟು ಸಮುದಾಯವನ್ನು ಹೊರಗಿಡಲಾ ಗುವುದೆಂದು ಅವರು ಹೇಳಿದ್ದಾರೆ.

You cannot copy contents of this page