ಅಧ್ಯಾಪಕನ ಕೈ ಕಡಿದ ಪ್ರಕರಣ: ಮುಖ್ಯ ಆರೋಪಿಗೆ ಅಡಗುತಾಣ ಒದಗಿಸಿದಾತ ಕಸ್ಟಡಿಗೆ

ಕಣ್ಣೂರು: ತೊಡುಪುಳ ನ್ಯುಮಾನ್ ಕಾಲೇಜು ಅಧ್ಯಾಪಕ ಪ್ರೊ. ಟಿ.ಜೆ. ಜೋಸೆಫ್‌ರ ಕೈ ಕಡಿದ ಪ್ರಕರಣದ ಮುಖ್ಯ ಆರೋಪಿಗೆ ತಲೆಮರೆಸಿಕೊಳ್ಳಲು ಸೌಕರ್ಯ ವೊದಗಿಸಿದ ವ್ಯಕ್ತಿಯನ್ನು ಎನ್‌ಐಎ ಕಸ್ಟಡಿಗೆ ತೆಗೆದಿದೆ. ಇರಿಟ್ಟಿ ವಿಳಕ್ಕೋಡ್ ನಿವಾಸಿ ಸಫೀರ್ (೨೮) ಎಂಬಾತ ಕಸ್ಟಡಿಗೊಳಗಾದ ಆರೋಪಿ. ತಲಶ್ಶೇರಿ ನ್ಯಾಯಾಲಯದಲ್ಲಿ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ತಲುಪಿದ ಸಫೀರ್‌ನನ್ನು ಎನ್‌ಐಎ ಉಪಾಯದಿಂದ ಕಸ್ಟಡಿಗೆ ತೆಗೆದಿದೆ.

ಪ್ರೊ. ಟಿ.ಜೆ. ಜೋಸೆಫ್‌ರ ಕೈಯನ್ನು ಕಡಿದು ಬೇರ್ಪಡಿಸಿದ ಪ್ರಕರಣದಲ್ಲಿ ಮುಖ್ಯ ಆರೋಪಿಯಾದ ಎರ್ನಾಕುಳಂ ನಿವಾಸಿ ಸವಾದ್‌ಗೆ ಮಟ್ಟನ್ನೂರಿನಲ್ಲಿ ಅಡಗಿ ಕುಳಿತುಕೊಳ್ಳಲು ಸೌಕರ್ಯ ಏರ್ಪಡಿಸಿಕೊಟ್ಟಿರುವುದು ಸಫೀರ್ ಆಗಿದ್ದಾನೆನ್ನಲಾಗಿದೆ. ಎಬಿವಿಪಿ ನೇತಾರ ಶ್ಯಾಮ್ ಪ್ರಸಾದ್ ಕೊಲೆ ಪ್ರಕರಣದಲ್ಲೂ ಸಫೀರ್ ಆರೋಪಿಯಾಗಿ ದ್ದಾನೆಂದು ತನಿಖಾ ಮೂಲಗಳು ತಿಳಿಸಿವೆ.

You cannot copy contents of this page