ಅನಂತಪುರದಲ್ಲಿ ಕೋಳಿ ತ್ಯಾಜ್ಯ: ಜನಪರ ಚಳವಳಿಗೆ ಶಾಸಕ ಬೆಂಬಲ
ಕುಂಬಳೆ: ಕಸಾಯಿಖಾನೆಗಳ ತ್ಯಾಜ್ಯ ಸಂಸ್ಕರಣೆ ಪ್ಲಾಂಟ್‌ನಿಂದ ಉಂಟಾಗಿರುವ ದುರ್ನಾತದ ವಿರುದ್ಧ ಕ್ರಿಯಾ ಸಮಿತಿ ಒಂದು ವಾರದಿಂದ ನಡೆಸುತ್ತಿರುವ ಸೇವ್ ಅನಂತಪುರ ಚಳವಳಿಗೆ ಶಾಸಕ ಎ.ಕೆ.ಎಂ. ಅಶ್ರಫ್ ಬೆಂಬಲ ಸೂಚಿಸಿದ್ದಾರೆ. ಉದ್ದಿಮೆ ಪಾರ್ಕ್‌ನ ತ್ಯಾಜ್ಯ ಸಂಸ್ಕರಣೆ ಘಟಕದಿಂದ ಹೊರಸೂಸುವ ದುರ್ನಾತ ಹಾಗೂ ಅಲ್ಲಿಂದ ಹರಿಯುತ್ತಿರುವ ಮಲಿನಜಲದಿಂದ ನಾಡಿನಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ನಾಗರಿಕರು ಎಂಟು ದಿನಗಳಿಂದ ಚಳವಳಿ ನಡೆಸುತ್ತಿದ್ದಾರೆ. ದುರ್ನಾತ, ತ್ಯಾಜ್ಯ ನೀರು ಹರಿದು ಬರುವಿಕೆ ತಡೆಯಬೇಕು, ಅನಂತಪುರದಲ್ಲಿ ಅನಿಯಂತ್ರಿತವಾಗಿ ನಡೆಯುವ ಕಗ್ಗಲ್ಲು ಗಣಿಗಾರಿಕೆ ತಡೆಯಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿಕೊಂಡು ಪೇರಾಲ್ ಕಣ್ಣೂರು, ಪೆರ್ಣೆ, ಕಾಮನಬಯಲು, ಅನಂತ ಪುರ, ನಾರಾಯಣಮಂಗಲ, ಪೊಟ್ಟೋರಿ ಪ್ರದೇಶದ ಜನರು ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲಿಗೆ ಭೇಟಿ ನೀಡಿ ಚಳವಳಿಗೆ ಬೆಂಬಲಿಸಿದ ಶಾಸಕರೊಂದಿಗೆ ಲೀಗ್ ಪದಾಧಿಕಾರಿಗಳೂ ಇದ್ದರು