ಅನಧಿಕೃತ ಬೀದಿ ವ್ಯಾಪಾರ ವಿರುದ್ಧ ವ್ಯಾಪಾರಿಗಳಿಂದ ಬೀದಿ ವ್ಯಾಪಾರ ಪ್ರತಿಭಟನೆ

ಕಾಸರಗೋಡು: ವ್ಯಾಪಾರ ಸಂಸ್ಥೆಗಳಿಗೆ ದಾರಿಯನ್ನು ಮುಚ್ಚಿ ಕಾಲುದಾರಿ ಹಾಗೂ ಪಾರ್ಕಿಂಗ್ ಸ್ಥಳವನ್ನು ಸ್ವಾಧೀನಪಡಿಸಿ ಗ್ರಾಹಕರ, ಜನರ ಪಾರ್ಕಿಂಗ್ ಸೌಕರ್ಯ, ಸಂಚಾರ ಸೌಕರ್ಯವನ್ನು ನಿಷೇಧಿಸಿ ನಡೆಸುವ ಬೀದಿ ವ್ಯಾಪಾರ ಮಾಫಿಯಾ ವಿರುದ್ಧ ಪ್ರತಿಕಾತ್ಮಕ ಬೀದಿ ವ್ಯಾಪಾರ ನಡೆಸಿ ಕಾಸರ ಗೋಡು ಮರ್ಚೆಂಟ್ಸ್ ಅಸೋಸಿ ಯೇಶನ್ ಪ್ರತಿಭಟಿಸುತ್ತಿದೆ. ನವೆಂಬರ್ ೨೮ರಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಹಳೆ ಬಸ್ ನಿಲ್ದಾಣದ ಮುಬಾರಕ್ ಮಸೀದಿ ಬಳಿಯಿಂದ ಮಾರ್ಕೆಟ್ ರಸ್ತೆವರೆಗೆ ಎಂ.ಜಿ. ರಸ್ತೆಯಲ್ಲಿ ಪ್ರತಿಭಟನೆ ವ್ಯಾಪಾರ ಎಂಬ ನೆಲೆಯಲ್ಲಿ  ಬೀದಿ ವ್ಯಾಪಾರ ನಡೆಸಲಾಗುವುದು. ವ್ಯಾಪಾರಿ ಲೈಸನ್ಸ್ ಹಾಗೂ ಎಲ್ಲಾ ವಿಧದ ತೆರಿಗೆಗಳನ್ನು ನೀಡಿ ವ್ಯಾಪಾರ ನಡೆಸುವ ಅಂಗೀಕೃತ ವ್ಯಾಪಾರ ಸಂಸ್ಥೆಗಳಲ್ಲಿ ಕೆಲವು ಬೀದಿ ವ್ಯಾಪಾರದಿಂದಾಗಿ ಮುಚ್ಚಬೇಕಾದ ಸ್ಥಿತಿ ಉಂಟಾಗಿದೆ. ಅನ್ಯರಾಜ್ಯ ಕಾರ್ಮಿಕರನ್ನಿಟ್ಟುಕೊಂಡು ನಗರಸಭೆಯ ಹೊರಗಿನ ವ್ಯಕ್ತಿಗಳನ್ನಿ ಟ್ಟುಕೊಂಡು ದಿನಂಪ್ರತಿ ಹೊಸ ಸ್ಟಾಲ್‌ಗಳನ್ನು ಬೀದಿ ವ್ಯಾಪಾರ ಮಾಫಿಯ ಸ್ಥಾಪಿಸುತ್ತಿದೆ. ಪ್ಲಾಸ್ಟಿಕ್ ನಿಷೇಧ ಫುಡ್‌ಸೇಫ್ಟಿ ಲೈಸನ್ಸ್ ಯಾವುದೂ ಬಾಧಕವಲ್ಲದ ಬೀದಿ ವ್ಯಾಪಾರ ದಿನವೂ ಹೆಚ್ಚುತ್ತಿದೆ.

ಈ ರೀತಿಯ ಅನಧಿಕೃತ ವ್ಯಾಪಾರವನ್ನು ಕೊನೆಗೊಳಿಸಬೇಕು, ಅಥವಾ ಅವರಿಗೆ ಬೇರೆ ಕಡೆ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಮನವಿ ನೀಡಿದ್ದರು. ಯಾವುದೇ ಪರಿಹಾರ ಉಂಟಾಗದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಮುಷ್ಕರ ರಂಗಕ್ಕಿಳಿದಿರುವುದಾಗಿ ಮರ್ಚೆಂಟ್ಸ್ ಅಸೋಸಿಯೇಶನ್ ತಿಳಿಸಿದೆ.

You cannot copy contents of this page