ಅನಧಿಕೃತ ಬೀಫ್ ಸ್ಟಾಲ್: ಮೂವರ ವಿರುದ್ಧ ಕೇಸು
ಮಂಜೇಶ್ವರ: ಅನಧಿಕೃತವಾಗಿ ನಡೆಯುತ್ತಿದ್ದ ಬೀಫ್ ಸ್ಟಾಲ್‌ಗೆ ಮಂಜೇಶ್ವರ ಪೊಲೀಸರು ನಿನ್ನೆ ದಾಳಿ ನಡೆಸಿ ಮೂವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಹೊಸಂಗಡಿ ಅಬಕಾರಿ ಚೆಕ್‌ಪೋಸ್ಟ್ ಬಳಿಯ ಬೀಫ್ ಸ್ಟಾಲ್‌ವೊಂದಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಬೀಫ್ ಸ್ಟಾಲ್ ನಡೆಸುತ್ತಿದ್ದ ಬಂಗ್ರ ಮಂಜೇಶ್ವರ ಮೇಲಂಗಡಿ ನಿವಾಸಿ ಮೂಸಕುಂಞಿ, ಉಪ್ಪಳ ನಿವಾಸಿ ಮೆಹಬೂ ಬ್ ಎಂ.ಎಸ್, ಬೀಫ್ ಸ್ಟಾಲ್ ನಡೆಸಲು ಸ್ಥಳವೊದಗಿಸಿದ್ದ ಉಪ್ಪಳದ ಅಬ್ದುಲ್ ಖಾದರ್ ಎಂಬಿವರ ವಿರುದ್ಧ ಕೇಸು ದಾಖ ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.