ಅನ್ಯರಾಜ್ಯ ಕಾರ್ಮಿಕನನ್ನು ಇರಿದು ಕೊಲೆ :ತಲೆಮರೆಸಿಕೊಂಡ ಸ್ನೇಹಿತನಿಗಾಗಿ ಶೋಧ
ಎರ್ನಾಕುಳಂ: ಪೆರುಂ ಬಾವೂರ್‌ನಲ್ಲಿ ಅನ್ಯರಾಜ್ಯ ಕಾರ್ಮಿಕನನ್ನು ಇರಿದು ಕೊಲೆಗೈದ ಘಟನೆ ನಡೆದಿದೆ. ವಟ್ಟಕ್ಕಾಡ್ ಪಡಿ ಎಂಬಲ್ಲಿ ವಾಸಿಸಿ ಕೆಲಸ ನಿರ್ವಹಿಸುತ್ತಿದ್ದ ಒಡಿಸ್ಸಾ ನಿವಾಸಿ ಆಕಾಶ್ ಡೀಗಲ್ (36) ಕೊಲೆಗೀಡಾದ ವ್ಯಕ್ತಿ. ಇವರ ಸ್ನೇಹಿತನೂ ಅದೇ ಊರಿನವನಾದ ಅಂಜನ ನಾಯ್ಕ್ (28) ಎಂಬಾತ ಕೊಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಈ ಇಬ್ಬರೊಳಗೆ ವಾಗ್ವಾದ ನಡೆದಿತ್ತು. ಅದು ತಾರಕಕ್ಕೇರಿದಾಗ ಆಕಾಶ್ ಡೀಗಲ್‌ನಿಗೆ ಅಂಜನ ನಾಯ್ಕ್ ಇರಿದಿದ್ದಾನೆ. ಅಲ್ಪ ಹೊತ್ತಿನಲ್ಲೇ ಆಕಾಶ್ ಡೀಗಲ್ ಸಾವಿಗೀಡಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಕೃತ್ಯದ ಬಳಿಕ ತಲೆಮರೆಸಿಕೊಂಡ ಆರೋಪಿಗಾಗಿ ಪೊಲೀಸರು ಶೋ ಆರಂಭಿಸಿದ್ದಾರೆ.