ಅನ್ವರ್ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾದ ಸಿಪಿಎಂ

ತಿರುವನಂತಪುರ:  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಸಿಪಿಎಂ ಬೆಂಬಲಿತ ಶಾಸಕನ ಆಗಿರುವ ಪಿ.ವಿ. ಅನ್ವರ್ ಮಾಡಿದ ಆರೋಪಗಳ ಸುರಿಮಳೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಪಿಎಂ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಸಿಪಿಎಂ ಕೇಂದ್ರ ಸಮಿತಿ ಹಾಗೂ ಪೋಲಿಟ್ ಬ್ಯೂರೋ ಸಭೆಗಳು ಇಂದು ಬೆಳಿಗ್ಗೆ  ದೆಹಲಿಯಲ್ಲಿ ಆರಂಭಗೊಂಡಿದ್ದು, ಅದರಲ್ಲಿ ಅನ್ವರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ವಿಷಯದ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಭೆಯ ಬಳಿಕ ಇಂದು ಅಪರಾಹ್ನ 2.30ಕ್ಕೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.  ಗೋವಿಂದನ್ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದು, ಅದರಲ್ಲಿ ಅನ್ವರ್ ವಿರುದ್ಧ ಪಕ್ಷ ಕೈಗೊಳ್ಳುವ ಶಿಸ್ತು ಕ್ರಮದ ಬಗ್ಗೆ ವಿದ್ಯುಕ್ತ ಘೋಷಣೆ ನಡೆಸುವರು.

ಅನ್ವರ್ ಮಾಡಿರುವ ಆರೋಪಗ ಳೆಲ್ಲವೂ ನನ್ನ ವಿರುದ್ಧ ಮಾತ್ರವಲ್ಲ, ಎಡರಂಗ ಮತ್ತು ಸರಕಾರದ ವಿರುದ್ಧ ಮಾಡಿರುವ ಆರೋಪಗಳಾಗಿವೆ. ಅದನ್ನೆಲ್ಲವನ್ನೂ ನಾನು ಸಾರಾಸಗಟಾಗಿ ತಿರಸ್ಕರಿಸುತ್ತೇನೆ ಎಂದು ದೆಹಲಿಯಲ್ಲಿ  ಮುಖ್ಯಮಂತ್ರಿ ಇಂದು ಬೆಳಿಗ್ಗೆ ಸುದ್ದಿಗಾರ ರಲ್ಲಿ ತಿಳಿಸಿದ್ದಾರೆ. ಅದ್ಯಾವುದೇ ತನಿಖೆ ಗಳಾಗಲೀ ಅದು ಅದರ ದಾರಿಯಲ್ಲೇ ಸಾಗಲಿದೆಯೆಂದೂ ಅವರು ಹೇಳಿದ್ದಾರೆ.

ತಿರುವನಂತಪುರವನ್ನು ಕೇಂದ್ರೀ ಕರಿಸಿ ಇತ್ತೀಚೆಗೆ ನಡೆದ ಚಿನ್ನ ಕಳ್ಳಸಾಗಾಟ ಮುಖ್ಯಮಂತ್ರಿಯವರ  ಆಶೀರ್ವಾದದೊಂದಿಗೇ ನಡೆದಿದೆ. ಮುಖ್ಯಮಂತ್ರಿ ಬಿಜೆಪಿಯೊಂದಿಗೆ ಸದಾ ನಂಟು ಹೊಂದಿದ್ದಾರೆ. ಆ ಮೂಲಕ ಕೇಂದ್ರ ತನಿಖಾ ತಂಡ ದಾಖಲಿಸಿಕೊಂ ಡಿರುವ ಪ್ರಕರಣದಿಂದ ತಮ್ಮ ಮಗಳನ್ನು ರಕ್ಷಿಸುವ ಯತ್ನವನ್ನು  ಮುಖ್ಯಮಂತ್ರಿ ನಡೆಸುತ್ತಿದ್ದಾರೆ.  ಎಡಿಜಿಪಿ ಅಜಿತ್ ಕುಮಾರ್ ಆರ್‌ಎಸ್‌ಎಸ್ ನೇತಾರ ರನ್ನು ಭೇಟಿಯಾಗಿರುವುದು ಮುಖ್ಯಮಂತ್ರಿ ಪರವಾಗಿಯೇ ಆಗಿತ್ತು ಎಂದು ವಿ.ಪಿ. ಅನ್ವರ್ ನಿನ್ನೆ ಆರೋಪಿ ಸಿದ್ದರು.  ಅಳಿಯ ಮತ್ತು ಸಚಿವನಾಗಿರುವ ಪಿ.ಎ. ಮೊಹ ಮ್ಮದ್ ರಿಯಾಸ್ ಮತ್ತು ಮಗಳು ವೀಣಾ ವಿಜಯನ್ ಒಳಗೊಂಡಿರುವ ತಂಡ ಮುಖ್ಯಮಂತ್ರಿಯನ್ನು ನಿಯಂತ್ರಿಸುತ್ತಿದೆ. ಸಿಪಿಎಂನ ಬಹುತೇಕ ಕಾರ್ಯಕರ್ತರು ಪಿಣರಾಯಿ ವಿಜಯನ್‌ರನ್ನು ಈಗ ದ್ವೇಷಿಸತೊಡಗಿದ್ದಾರೆ. ಮುಖ್ಯಮಂತ್ರಿ ಸಿಪಿಎಂನ ಪ್ರಭಾವಿ ಹಾಗೂ ಹಿರಿಯ ನೇತಾರನ ಆಗಿದ್ದಾರೆ. ಅವರು ಆರ್‌ಎಸ್‌ಎಸ್‌ಗೆ ಬಹಿರಂಗವಾಗಿ ಈ ಹಿಂದೆ ಹತ್ಯಾಬೆದರಿಕೆಯೊಡ್ಡಿದ್ದರು. ಆರ್‌ಎಸ್‌ಎಸ್ ನೇತಾರರ ತಲೆಗೆ  ಬೆಲೆಕಟ್ಟಿದ್ದ  ವ್ಯಕ್ತಿಯೂ ಆಗಿದ್ದರು. ರಾಜಕೀಯ ಆರಂಭಿಸಿದ ಕಾಲದಿಂ ದಲೇ ಅವರು ಸಂಘ ಪರಿವಾರದ ವಿರುದ್ಧ ಹೋರಾಟ ಆರಂಭಿಸಿದ್ದರು. ಈಗ  ತನ್ನ  ಮತ್ತು  ಪುತ್ರಿಯ ವಿರುದ್ಧ  ಕೇಂದ್ರ ತನಿಖಾ ತಂಡ ತನಿಖೆಗೆ ಮುಂದಾದ ಹಿನ್ನೆಲೆಯಲ್ಲಿ    ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ನಂಟು ಬೆಳೆಸತೊಡಗಿ ದ್ದಾರೆಂದು ಅನ್ವರ್ ಆರೋಪಿಸಿದರು.

You cannot copy contents of this page