ಕಲ್ಲಿಕೋಟೆ: ಎಡರಂಗದ ವಿರುದ್ಧ ತಿರುಗಿ ಬಿದ್ದಿರುವ ಪಿ.ವಿ. ಅನ್ವರ್ ಸಹಕರಿಸಿದಲ್ಲಿ ಅವರನ್ನು ಬೆಂಬಲಿಸ ಲಾಗುವುದಲ್ಲದೆ ಯುಡಿಎಫ್‌ಗೂ ಸ್ವಾಗತ ನೀಡಲಾಗುವುದೆಂದು ಮುಸ್ಲಿಂ ಲೀಗ್ ನೇತಾರ ಕೆ.ಎಂ. ಶಾಜಿ ತಿಳಿಸಿದ್ದಾರೆ.
ಅನ್ವರ್ ಹೊಸ ರಾಜಕೀಯ ಪಕ್ಷ ರೂಪೀಕರಿಸಿದಲ್ಲಿ ಇದ ಮುಸ್ಲಿಂ ಲೀಗ್‌ಗೆ ಸವಾಲಾಗದು. ಅವರು ತಳೆದ ನಿಲುವು ಧೀರವಾದು ದೆಂದು ಶಾಜಿ ಹೇಳಿದ್ದಾರೆ.
ಯುಡಿಎಫ್ ಪರ ನಿಲುವು ವ್ಯಕ್ತಪಡಿಸಿದಲ್ಲಿ ಅನ್ವರ್‌ರನ್ನು ನಾನು ಸ್ವಾಗತಿಸುವೆ. ಅವರು ರೂಪು ನೀಡುವ ಪಕ್ಷ ನಮಗೆ ಎಂದೂ ಒಂದು ಸವಾಲಾಗದು. ಅವರು ಸರಿಯಾದ ತೀರ್ಮಾನವನ್ನೇ ಕೈಗೊಂಡಿದ್ದಾರೆ. ಅವರು ರೂಪು ನೀಡುವಪಕ್ಷ ಸಹಕರಿಸಿದಲ್ಲಿ ಆ ಪಕ್ಷವನ್ನು ಯುಡಿಎಫ್‌ಗೆ ಸ್ವಾಗತಿಸಲಾಗುವುದೆಂದೂ ಶಾಜಿ ತಿಳಿಸಿದ್ದಾರೆ.







