ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಪೈಂಟಿಂಗ್ ಕಾರ್ಮಿಕ ಮೃತ್ಯು

ಮಂಜೇಶ್ವರ:  ಡಿಸೆಂಬರ್ 31ರಂದು ರಾತ್ರಿ ಮಂಗಳೂರಿನಲ್ಲಿ ನಡೆದ ಹೊಸವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೈಕ್‌ನಲ್ಲಿ ಹಿಂತಿರುಗುತ್ತಿದ್ದ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಬಾಳಿಯೂರು ನಿವಾಸಿ ಪೈಂಟಿಂಗ್ ಕಾರ್ಮಿಕ ಚೇತನ್ ಕುಮಾರ್ (24) ಮೃತಪಟ್ಟರು. ಇವರು ಸಂಚರಿಸುತ್ತಿದ್ದ ಬೈಕ್ ಹಾಗೂ ಇನ್ನೊಂದು ಬೈಕ್ ಮುಖಾಮುಖಿಯಾಗಿದ್ದು, ಅಪಘಾತ ದಿಂದ ತಲೆ, ಮುಖಕ್ಕೆ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೊಸಂಗಡಿಯ ಅಂಗಡಿಪದವಿನಲ್ಲಿ ಈ ಹಿಂದೆ ಶೇಂದಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು ಬಳಿಕ ಪೈಂಟಿಂಗ್ ಕಾರ್ಮಿಕನಾಗಿದ್ದರು. ಡಿವೈಎಫ್‌ಐ ಕಾರ್ಯಕರ್ತ, ಯುವಧಾರಾ ಫ್ರೆಂಡ್ಸ್ ಕ್ಲಬ್‌ನ ಸಕ್ರಿಯ ಸದಸ್ಯನಾಗಿದ್ದರು. ಇವರ ಚಿಕಿತ್ಸೆಗಾಗಿ ಚಿರುಗುಪಾದೆ ಯುವಧಾರಾ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಹಣ ಸಂಗ್ರಹಿಸಿ ನೀಡಲಾಗಿತ.  ಇವರ ತಂದೆ ಪದ್ಮನಾಭ ಪೂಜಾರಿ ಈ ಹಿಂದೆ ನಿಧನಹೊಂದಿ ದ್ದಾರೆ. ಮೃತರು ತಾಯಿ ಜಾನಕಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.  ಮೃತರ ಮನೆಗೆ ಸಿಪಿಎಂ ಮುಖಂಡರಾದ ವಿ.ವಿ. ರಮೇಶನ್, ಅಬ್ದುಲ್ ರಜಾಕ್ ಚಿಪ್ಪಾರು, ಲೋಕೇಶ ಸಿ, ಡಿಫಿ ಮುಖಂಡ ವಿನಯ ಕುಮಾರ್, ಆಕಾಶ್, ಉದಯ ಸಿ.ಎಚ್, ಅನಿಲ್ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಿಧನಕ್ಕೆ ಡಿಫಿ ಹಾಗೂ ಯುವಧಾರಾ ಫ್ರೆಂಡ್ಸ್ ಕ್ಲಬ್ ಸಂತಾಪ ಸೂಚಿಸಿದೆ.

You cannot copy contents of this page