ಅಪರಿಮಿತ ಮಾತ್ರೆ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು
ಹೊಸದುರ್ಗ: ಅಪರಿಮಿತವಾಗಿ ಕಬ್ಬಿಣಾಂಶವಿರುವ ಮಾತ್ರೆ ಸೇವಿಸಿ ಗಂಭೀರಾವಸ್ಥೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಪಯ್ಯನ್ನೂರು ಪಾಣಪ್ಪುಳ ಭೀಮನಡಿ ನಿವಾಸಿ ಕೆ.ಪಿ. ಪ್ರಿನ್ಶ (38) ಮೃತಪಟ್ಟ ಯುವತಿ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಅಂತ್ಯ ಸಂಭವಿಸಿದೆ. ಆದಿತ್ಯವಾರ ಬೆಳಿಗ್ಗೆ 11 ಗಂಟೆಗೆ ಪ್ರಿನ್ಶಳನ್ನು ಅಸ್ವಸ್ಥ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಹಚ್ಚಲಾಗಿತ್ತು. ಕೂಡಲೇ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಲಾಯಿತು. ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಂಗಳೂ ರಿಗೆ ಕೊಂಡುಹೋಗಲು ವೈದ್ಯರು ನಿರ್ದೇಶಿಸಿದ್ದರು. ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ನಿನ್ನೆ ಬೆಳಿಗ್ಗೆ ಸಾವು ಸಂಭವಿಸಿದೆ. ಪರಿಯಾರಂ ಪೊಲೀಸರು ಅಸಹಜ ಪ್ರಕರಣದಂತೆ ಕೇಸು ದಾಖಲಿಸಿದ್ದಾರೆ. ಇಂದು ಅಪರಾಹ್ನ ಮೃತದೇಹವನ್ನು ಮನೆಗೆ ತಲುಪಿಸಿ ಅಂತ್ಯ ಸಂಸ್ಕಾರ ನಡೆಯಲಿದೆ. ಮೃತ ಯುವತಿ ಪತಿ ಬಿ.ಪಿ. ಬಿಜು, ಮಕ್ಕಳಾದ ಆದಿತ್ಯನ್, ಅನಾಮಿಕ ಹಾಗೂ ಅಪಾರ ಬಂಧು-ಮಿತ್ರರರನ್ನು ಅಗಲಿದ್ದಾರೆ.