ಅಪಾರ್ಟ್‌ಮೆಂಟ್‌ನಲ್ಲಿ ದಾಖಲುಪತ್ರಗಳಿಲ್ಲದೆ ಬಚ್ಚಿಡಲಾಗಿದ್ದ 13.16 ಲಕ್ಷ ರೂ. ನಗದು ವಶ
ಕಾಸರಗೋಡು: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಕಾಳಧನ, ಹವಾಲಾ ಹಣ ಇತ್ಯಾದಿಗಳ ಹರಿದು ಬರುವಿಕೆಯನ್ನು ತಡೆಗಟ್ಟಲು ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಜಿಲ್ಲೆಯಾಧ್ಯಂತ ವ್ಯಾಪಕ ತಪಾಸಣೆ ಶೋಧ ಆರಂಭಿಸುವಂತೆಯೇ, ಉಳಿಯ ತ್ತಡ್ಕದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವಿನೋಯ್ ಕೆ.ಜೆ.ರ ನೇತೃತ್ವದಲ್ಲಿ ನಿನ್ನೆ ನಡೆಸಿದ ದಾಳಿಯಲ್ಲಿ ಸರಿಯಾದ ದಾಖಲೆ ಪತ್ರಗಳಿಲ್ಲದೆ ಬಚ್ಚಿಡಲಾಗಿದ್ದ 13,16,000ರೂ. ನಗದನ್ನು ಪತ್ತೆಹಚ್ಚಿದ್ದಾರೆ.
ಉಳಿಯತ್ತಡ್ಕ ಸಮೀಪದ ವರ್ಕತ್ತೋಡಿ ಅಬ್ದುಲ್ ಲತೀಫ್ ಎಂಬವರು ವಾಸಿಸುತ್ತಿರುವ ಮಜಿಲ ಅಪಾರ್ಟ್‌ಮೆಂಟ್‌ನಿಂದ ಈ ನಗದು ಪತ್ತ್ತೆಹಚ್ಚಿ ವಶಪಡಿಸಲಾಗಿದೆ. ಈ ಹಣವನ್ನು500 ರೂ.ಗಳ 26 ಕಟ್ಟಗಳಲ್ಲಾಗಿ ಬ್ಯಾಗ್‌ನಲ್ಲಿ ತುಂಬಿಸಿ ಡಲಾಗಿತ್ತು. ಈ ಅಪಾರ್ಟ್‌ಮೆಂಟ್‌ನಲ್ಲಿ ಹಣ ಬಚ್ಚಿಡಲಾಗಿದೆ ಎಂಬ ಗುಪ್ತ ಮಾಹಿತಿ ಲಭಿಸಿದನ್ವಯ ಇನ್ಸ್‌ಪೆಕ್ಟರ್ ವಿನೋಯ್, ಇನ್ಸ್‌ಪೆಕ್ಟರ್ ದೀಪ್ತಿ, ಎಎಸ್‌ಐ ಪ್ರಸಾದ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಶರತ್ ಚಂದ್ರನ್, ರೋಜನ್ ಎಂಬವರನ್ನೊ ಳಗೊಂಡ ಪೊಲೀಸರು ಅಲ್ಲಿಗೆ ದಾಳಿ ನಡೆಸಿ ಈ ಹಣ ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಅಬ್ದುಲ್ ಲತೀಫ್‌ನ ಹೇಳಿಕೆಗಳನ್ನು ಪೊಲೀಸರು ದಾಖ ಲಿಸಿಕೊಂಡು ಬಳಿಕ ಆತನನ್ನು ಬಿಡುಗಡೆ ಗೊಳಿಸಿದ್ದಾರೆ. ವಶಪಡಿಸಲಾದ ಹಣವನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.