ಅಪ್ರಾಪ್ತರಿಂದ ಸ್ಕೂಟರ್ ಸವಾರಿ: ಆರ್‌ಸಿ ಮಾಲಕರ ವಿರುದ್ಧ ಕೇಸು
ಮಂಜೇಶ್ವರ: ಅಪ್ರಾಪ್ತರಿಬ್ಬರು ಸ್ಕೂಟರ್ ಚಲಾಯಿಸಿದ ಪ್ರಕರಣದಲ್ಲಿ ಆರ್‌ಸಿ ಮಾಲಕರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ದ್ವಿಚಕ್ರ ವಾಹನ ಗಳನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆ ಬೆಳಿಗ್ಗೆ ಕುಂಜತ್ತೂರು ಸಣ್ಣಡ್ಕದಿಂದ ಒಂದು ಸ್ಕೂಟರನ್ನು ವಶಪಡಿ ಸಿದ್ದು, ಸಂಜೆ ಹೊಸಬೆಟ್ಟುವಿನಿಂದ ಇನ್ನೊಂದನ್ನು ವಶಪಡಿಸಿದ್ದಾರೆ. ಮಂಜೇಶ್ವರ ಠಾಣೆಯ ಎಸ್‌ಐ ಅಜಯ್ ಎಸ್. ಮೆನೋನ್, ತಂಡದ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆ ದಾರಿಯಾಗಿ ಬಂದ ಸ್ಕೂಟರ್ ಗಳನ್ನು ವಶಕ್ಕೆ ಪಡೆಯಲಾಗಿದೆ.