ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ : ಸಿವಿಲ್ ಪೊಲೀಸ್ ಸೆರೆ
ಪಾಲಕ್ಕಾಡ್: ಮಲಪ್ಪುರಂ ಅರಿಕ್ಕೋಡ್ ಕ್ಯಾಂಪ್‌ನ ಸಿವಿಲ್ ಪೊಲೀಸ್ ಆಫೀಸರ್ ಆದ ಅಜೀಶ್ (28)ನನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತೆಯಾದ ಬಾಲಕಿಯನ್ನು ದೌರ್ಜನ್ಯಗೈದ ಪ್ರಕರಣದಲ್ಲಿ ಪೋಕ್ಸೋ ಕೇಸಿನಂತೆ ಈತನನ್ನು ಸೆರೆ ಹಿಡಿಯಲಾಗಿದೆ. ಪಾಲ ಕ್ಕಾಡ್ ಪುದುಶ್ಶೇರಿ ನಿವಾಸಿ ಯಾದ ಈತನನ್ನು ಬಾಲಕಿಯ ದೂರಿನಂತೆ ಪಾಲಕ್ಕಾಡ್ ಕಸಬಾ ಪೊಲೀಸರು ಬಂಧಿಸಿದ್ದಾರೆ. ಈತ ಈ ಹಿಂದೆಯೂ ಇನ್ನೋರ್ವೆ ಬಾಲಕಿ ವಿರುದ್ಧ ಅನುಚಿತ ರೀತಿಯಲ್ಲಿ ವರ್ತಿಸಿರುವುದಾಗಿ ಪೊಲೀಸರಿಗೆ ದೂರು ಲಭಿಸಿತ್ತು. ಮುಟ್ಟಿಕುಳಂಗರ ಕ್ಯಾಂಪ್‌ನಲ್ಲಿ ಅಧಿಕಾರಿಯಾಗಿದ್ದ ಈತ ಪ್ರತ್ಯೇಕ ತರಬೇತಿಗಾಗಿ ಇತ್ತೀಚೆಗೆ ಅರಿಕ್ಕೋ ಡ್‌ಗೆ ವರ್ಗಾವಣೆಗೊಂಡಿದ್ದನು.