ಅಬಕಾರಿ ಅಧಿಕಾರಿಗಳಿಂದ ಬೆದರಿಕೆ ಆರೋಪ: ಪೆರ್ಲದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಲಾಟರಿ ಏಜೆಂಟ್

ಪೆರ್ಲ: ಪೆರ್ಲ ಚೆಕ್‌ಪೋಸ್ಟ್ ಬಳಿಯ ಲಾಟರಿ ಮಾರಾಟಗಾರನೂ, ವಿಕಲಚೇತನರಾದ ಕನ್ನಟಿಕಾನದ ಮೊಯ್ದೀನ್ ಎಂಬವರು ನ್ಯಾಯ ದೊರಕಿಸಬೇಕೆಂಬ  ಬೇಡಿಕೆಯೊಡ್ಡಿ ಮೂರು ದಿನಗಳಿಂದ ಲಾಟರಿ ಅಂಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಒಂದು ತಿಂಗಳ ಹಿಂದೆ ಅಬಕಾರಿ ತಂಡ ಮೊಯ್ದೀನ್‌ರ ಲಾಟರಿ ಅಂಗಡಿಗೆ ತಲುಪಿ ಅವರನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿತ್ತು. ಅಂಗಡಿಯಲ್ಲಿ ಅನಧಿಕೃv ವಾಗಿ ಮದ್ಯ ಮಾರಾಟ ನಡೆಯು ತ್ತಿದೆಯೆಂದು ಆರೋಪಿಸಿ ಮೊಯ್ದೀನ್‌ರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯ ಮೊಯ್ದೀನ್‌ರಿಗೆ 22 ದಿನಗಳ ಸಜೆ ವಿಧಿಸಿತ್ತು. ವಾರದಲ್ಲಿ ಒಂದು ದಿನ ಎಂಬಂತೆ ೧೦ ವಾರ ಅಬಕಾರಿ ಕಚೇರಿಗೆ ತಲುಪಿ ಸಹಿ ಹಾಕಬೇಕೆಂಬ ನಿಬಂಧನೆಯೊಂದಿಗೆ ಜಾಮೀನು ನೀಡಲಾಗಿತ್ತೆನ್ನಲಾಗಿದೆ. ಇದರಂತೆ ನಾಲ್ಕು ಬಾರಿ ಅಬಕಾರಿ ಕಚೇರಿಗೆ ತೆರಳಿ ಮೊಯ್ದೀನ್ ಸಹಿ ಹಾಕಿದ್ದಾರೆ. ಇದೇ ವೇಳೆ ಅಬಕಾರಿ ಕಚೇರಿಗೆ ತಲುಪುವಾಗ ನೌಕರರು ನಿರಂತರ ತನಗೆ ಬೆದರಿ ಕೆಯೊಡ್ಡುತ್ತಿದ್ದಾರೆಂದೂ ಆದ್ದರಿಂದ ಅನಂತರ ಸಹಿ ಹಾಕಲು ಅಬಕಾರಿ ಕಚೇರಿಗೆ ಹೋಗಿಲ್ಲವೆಂದು ಮೊಯ್ದೀನ್ ತಿಳಿಸಿದ್ದಾರೆ. ಅನಂತರ ತಾನು ಅಂಗಡಿಯಲ್ಲಿಲ್ಲದ ವೇಳೆ ಅಬಕಾರಿ ತಂಡ ತಲುಪಿ ಅಂಗಡಿಯ ಲ್ಲಿದ್ದ ಸಾಮಗ್ರಿಗಳನ್ನು ನಾಶಗೊಳಿಸಿದ್ದ ರೆಂದೂ ದೂರಲಾಗಿದೆ. ಇದನ್ನು ಪ್ರತಿಭಟಿಸಿ ಸ್ವಯಂ ಕೈಗೆ ಗಾಯ ಗೊಳಿಸಿಕೊಂಡ ಮೊಯ್ದೀನ್ ಪರಿ ಯಾರಂನಲ್ಲಿ ಚಿಕಿತ್ಸೆ ಪಡೆದಿದ್ದರು. ಆಸ್ಪತ್ರೆಯಿಂದ ಅಂಗಡಿಗೆ ತಲುಪಿದ ತನಗೆ ಮತ್ತೆ ಬೆದರಿಕೆಯುಂಟಾಗಿ ರುವುದರಿಂದ ಅಂಗಡಿಯೊಳಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿರುವುದಾಗಿ ಮೊಯ್ದೀನ್ ತಿಳಿಸಿದ್ದಾರೆ. ತನಗೆ ಬೆದರಿಕೆಯೊಡ್ಡಿದ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ನ್ಯಾಯಯುತ ರೀತಿಯಲ್ಲಿ ಜೀವಿಸಲು ಕಾನೂನು ರೀತಿಯ ಅವಕಾಶ ಒದಗಿಸಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿರು ವುದಾಗಿ ಅವರು ತಿಳಿಸಿದ್ದಾರೆ.

You cannot copy contents of this page