ಅಬಕಾರಿ ಕಾರ್ಯಾಚರಣೆ : ಎಂ.ಡಿ.ಎಂ.ಎ ಸಹಿತ ಮಹಿಳೆ ಸೆರೆ
ಕಾಸರಗೋಡು: ಮೊಗ್ರಾಲ್ ಪುತ್ತೂರು ಎರಿಯಾಲ್ ಪಂಜದಗುಡ್ಡೆ ಯಲ್ಲಿ ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ. ಅವರ ನೇತೃತ್ವದಲ್ಲಿ ನಡೆದ ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾರಕ ಮಾದಕ ದ್ರವ್ಯವಾದ ೯.೦೨೧ ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿ ಸಲಾಗಿದೆ.
ಇದಕ್ಕೆ ಸಂಬಂಧಿಸಿ ಪಂಜದ ಗುಡ್ಡೆಯಲ್ಲಿ ವಾಸಿಸುತ್ತಿರುವ ರಸೂನಾ ಎಸ್. (೩೦) ಎಂಬಾಕೆ ಯನ್ನು ಬಂಧಿಸಲಾಗಿದೆ. ಆಕೆಯ ವಿರುದ್ಧ ಎನ್‌ಡಿಪಿಎನ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾ ಗಿದೆ. ಬಂಧಿತಳನ್ನು ನಂತರ ನ್ಯಾಯಾಲಯದಲ್ಲಿ ಹಾಜರು ಪಡಿಸಿ, ಬಳಿಕ ನ್ಯಾಯಾಲಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಮುರಳಿ ಕೆ.ವಿ., ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸತೀಶನ್ ಕೆ, ಶಿಜಿತ್ ವಿ.ವಿ, ಮಹಿಳಾ ಸಿಇಒ ಕೃಷ್ಣ ಪ್ರಿಯಾ, ಎಂ.ವಿ ಮತ್ತು ಅಬಕಾರಿ ಚಾಲಕ ಕ್ರಿಸ್ಟಿನ್ ಪಿ.ಎಸ್. ಎಂಬವರು ಒಳಗೊಂಡಿದ್ದರು.