ಅಬಕಾರಿ ದಾಳಿ: ಗಾಂಜಾ, ಮದ್ಯ ಪತ್ತೆ; ಓರ್ವ ಸೆರೆ

ಕುಂಬಳೆ: ಕುಂಬಳೆ ರೇಂಜ್‌ನ ಅಬಕಾರಿ ತಂಡ ನಿನ್ನೆ ಎರಡೆಡೆಗಳಲ್ಲಾಗಿ ದಾಳಿ ನಡೆಸಿ ಗಾಂಜಾ ಮತ್ತು ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ. ಕಯ್ಯಾರು ಗ್ರಾಮದ ಪಚ್ಚಂಬಳದಲ್ಲಿ ಕುಂಬಳೆ ರೇಂಜ್‌ನ ಅಬಕಾರಿ  ಕಚೇರಿಯ ಎಕ್ಸೈಸ್ ಇನ್ಸ್‌ಪೆಕ್ಟರ್ ಶ್ರವಣ್ ಕೆ.ವಿ.ಯವರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 25 ಗ್ರಾಂ ಗಾಂಜಾ ಕೈವಶವಿರಿಸಿಕೊಂಡ ಆರೋಪದಂತೆ ಪಚ್ಚಂಬಳದ ಅಬ್ದುಲ್ ರಹೀಂ (35) ಎಂಬಾತನನ್ನು ಬಂಧಿಸಲಾಗಿದೆ. ಗಾಂಜಾವನ್ನು ವಶಕ್ಕೆ ತೆಗೆದುಕೊಂಡು  ಕೇಸು ದಾಖಲಿಸ ಲಾಗಿದೆ. ಈ ಕಾರ್ಯಾಚರಣೆ ನಡೆ ಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಪೀತಾಂಭರನ್ ಕೆ, ಸಿವಿಲ್ ಎಕ್ಸೈಸ್ ಆಫೀಸರ್ ಸುರ್ಜಿತ್ ಕೆ. ಮತ್ತು ಚಾಲಕ ಪ್ರವೀಣ್ ಕುಮಾರ್ ಎಂಬವರು ಒಳಗೊಂಡಿದ್ದರು.

ಇದರ ಹೊರತಾಗಿ ಹೊಸಂಗಡಿ ಯಲ್ಲಿ ಇದೇ ಅಬಕಾರಿ ತಂಡ ನಿನ್ನೆ ನಡೆಸಿದ ಇನ್ನೊಂದು ಕಾರ್ಯಾ ಚರಣೆಯಲ್ಲಿ 2.88  ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿ ಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮುಳಿಂಜ ಗೌಡಮೂಲೆಯ ಪ್ರವೀಣ್ ಕುಮಾರ್ ಜಿ. (28) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದೂ, ಆದರೆ ಆ ವೇಳೆ ಆತ ಪರಾರಿಯಾದ ಕಾರಣದಿಂದ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page