ಅಬೂಬಕರ್ ಸಿದ್ದಿಕ್ ಕೊಲೆ ಪ್ರಕರಣ:  ಸೆರೆಗೀಡಾದ ಮಂಜೇಶ್ವರ ನಿವಾಸಿಯನ್ನು ತನಿಖೆಗೊಳಪಡಿಸಿದ ಕ್ರೈಂ ಬ್ರಾಂಚ್

ಕಾಸರಗೋಡು:  ಸೀತಾಂ ಗೋಳಿ ಮುಗುರೋಡ್‌ನ ನಿವಾಸಿ ಅಬೂಬಕರ್ ಸಿದ್ದಿಕ್ ರನ್ನು ಅಪಹರಿಸಿ ಹಲ್ಲೆಗೈದು ಕೊಲೆ ನಡೆಸಿದ ಪ್ರಕರಣದಲ್ಲಿ ಸೆರೆಗೀ ಡಾದ ಮುಖ್ಯ ಆರೋಪಿಯನ್ನು ಕ್ರೈಂಬ್ರಾಂಚ್ ಎಸ್ಪಿ ಪಿ. ಬಾಲಕೃಷ್ಣನ್ ನಾಯರ್ ತನಿಖೆ ಗೊಳಪಡಿಸಿದ್ದಾರೆ.  ಮಂಜೇಶ್ವರ ಆಚೆಕರೆ ನಿವಾಸಿಯಾದ ಅಶರ್ ಅಲಿ (27) ಎಂಬಾತನನ್ನು ಕ್ರೈಂಬ್ರಾಂಚ್‌ನ ಕಾಸರಗೋಡು ಕಚೇರಿಯಲ್ಲಿ ಸಮಗ್ರವಾಗಿ ತನಿಖೆಗೊಳಪಡಿ ಸಲಾಯಿತು.  ಊರಿಗೆ ಮರಳುತ್ತಿದ್ದ ಮಧ್ಯೆ ಈತನನ್ನು ಮೊನ್ನೆ ಸಂಜೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ  ಡಿವೈಎಸ್ಪಿ ಪಿ. ಮಧುಸೂದನನ್ ನಾಯರ್ ನೇತೃತ್ವದ ತಂಡ ಸೆರೆಹಿಡಿದಿತ್ತು. 2022 ಜೂನ್ 26ರಂದು  ಸೀತಾಂಗೋಳಿ ಮುಗು ರೋಡ್‌ನ ನಿವಾಸಿಯೂ ಗಲ್ಫ್ ಉದ್ಯೋಗಿಯಾದ ಅಬೂಬಕರ್ ಸಿದ್ದಿಕ್‌ರನ್ನು ಅಪಹರಿಸಿ ಪೈವಳಿಕೆಯ ನಿರ್ಜನ ಪ್ರದೇಶದಲ್ಲಿ ಹೊಡೆದು ಕೊಲೆಗೈಯ್ಯಲಾಗಿತ್ತು. ಈ ಪ್ರಕರಣದಲ್ಲಿ ನೇರವಾಗಿ  ಭಾಗಿಯಾದ ಅಶರ್ ಅಲಿ  ಕೊಲೆಕೃತ್ಯ ನಡೆದ ದಿನದಂದೇ ಗಲ್ಫ್‌ಗೆ ಪರಾರಿಯಾಗಿದ್ದನು. ಬಳಿಕ ದುಬಾಯಿಯ ದೇರ ಎಂಬಲ್ಲಿ  ತಲೆಮರೆಸಿಕೊಂಡಿದ್ದನು.

ಈತ ಕ್ರೈಂಬ್ರಾಂಚ್‌ನ ನಿರಂತರ ಒತ್ತಡದ ಹಿನ್ನೆಲೆಯಲ್ಲಿ ಊರಿಗೆ ಮರಳಿದ್ದನು. ಕೊಲೆ ಪ್ರಕರಣ ಮಾತ್ರವಲ್ಲದೆ ಈತ ಅಬೂಬಕರ್ ಸಿದ್ದಿಕ್‌ರ ಸಹೋದರ ಹಾಗೂ ಸ್ನೇಹಿತನನ್ನು ಕೊಲೆಗೈಯ್ಯಲು ಯತ್ನಿಸಿರುವುದಾಗಿಯೂ ಕ್ರೈಂ ಬ್ರಾಂಚ್ ಮೂಲಗಳು ತಿಳಿಸಿವೆ.  ಕ್ರೈಂಬ್ರಾಂಚ್  ತಂಡದಲ್ಲಿ ಎಸ್‌ಐಗಳಾದ ರವೀಂದ್ರನಾಥ್, ಮೋಹನನ್, ಎಎಸ್ಪಿ ಪ್ರಮೋದ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಗೋಪನ್, ಚಾಲಕ ರೌಫ್ ಎಂಬಿವರಿದ್ದರು. 

Leave a Reply

Your email address will not be published. Required fields are marked *

You cannot copy content of this page